







ರೂ.225.97 ಕೋಟಿ ವ್ಯವಹಾರ ರೂ. 65.78 ಲಕ್ಷ ಲಾಭ ಶೇ.15 ಡಿವಿಡೆಂಡ್


ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ಧರ್ಮಸ್ಥಳ ಮಂಜುಶ್ರೀ ಕಟ್ಟಡದಲ್ಲಿ ಪರಿವಾರದ ಸಂಪೂರ್ಣ ಆರ್ಥಿಕ ಸುದೃಡ ಬೆಳವಣಿಗೆಗಾಗಿ ಎಂಬ ದ್ಯೇಯ ವಾಕ್ಯದೊಂದಿಗೆ ಕಳೆದ 26 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಸೆ.20 ರಂದು ಪುತ್ತೂರು ತೆಂಕಿಲ ಬೈಪಾಸ್ ಬಳಿಯ ದರ್ಶನ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ರವರ ಅಧ್ಯಕ್ಷತೆಯಲ್ಲಿ ನಡೆಯಿತು.



ವರದಿ ಸಾಲಿನಲ್ಲಿ ಸೊಸೈಟಿ ರೂ.225.97ಕೋಟಿ ವ್ಯವಹಾರ ನಡೆಸಿ ರೂ.65.78 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸದಸ್ಯತನ ಮತ್ತು ಪಾಲು ಬಂಡವಾಳ:
ವರದಿ ವರ್ಷದಲ್ಲಿ ಸಂಸ್ಥೆಯು 1780 ಸದಸ್ಯರನ್ನು ಹೊಂದಿದೆ. ಎ ತರಗತಿ ಸದಸ್ಯರಿಂದ ರೂ.1,03,31,600 ಬಿ ತರಗತಿ ಸದಸ್ಯರಿಂದ ರೂ.1,67,700ಹಾಗೂ ಸಿ ತರಗತಿ ಸದಸ್ಯರಿಂದ ರೂ.82,025ಪಾಲು ಬಂಡವಾಳ ಹೊಂದಿದೆ. ರೂ. 40,74,26,746 ವಿವಿಧ ರೂಪದ ಠೇವಣಿ, ರೂ1,07,78,900 ಕ್ಷೇಮ ನಿಧಿ ಮತ್ತು 1,72,92,594 ಕಟ್ಟಡ ನಿಧಿಯನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ವಿತರಿಸಲಾದ ಸಾಲಗಳ ಪೈಕಿ ರೂ. 39,76,76,267 ಸಾಲ ಹೊರಬಾಕಿಯಿರುತ್ತದೆ. ವಿವಿಧ ಬ್ಯಾಂಕ್ಗಳಲ್ಲಿ ರೂ.9,14,56,787ನ್ನು ವಿನಿಯೋಗಿಸಲಾಗಿದೆ. ಸಂಘದಲ್ಲಿ ರೂ.24,96,116ನಗದು ಶಿಲ್ಕು ಹಾಗೂ ರೂ.1,32,56,975 ಬ್ಯಾಂಕ್ ಶಿಲ್ಕು ಹೊಂದಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘವು ಸತತವಾಗಿ ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಯೋಜನೆಗಳು:
ಉಳಿತಾಯ ಖಾತೆಯ ಕಂಪ್ಯೂಟರೀಕೃತ ಪಾಸು ಪುಸ್ತಕವನ್ನು ಕೇಂದ್ರ ಕಛೇರಿ,ಕೊಕ್ಕಡ ಮತ್ತು ಮಂಗಳೂರು ಶಾಖೆಯಲ್ಲಿ ಪ್ರಾರಂಭಿಸಿದ್ದು ಮುಂದಿನ ದಿನಗಳಲ್ಲಿ ಕಡಬ ಮತ್ತು ಸುಳ್ಯ ಶಾಖೆಗಳಲ್ಲಿ ಪ್ರಾರಂಭಿಸಲಾಗುವುದು. ಸಂಘದ ಕಾರ್ಯ ವ್ಯಾಪ್ತಿಯಲ್ಲಿ ನೂತನ ಶಾಖೆಗಳನ್ನು ತೆರೆಯಲಾಗುವುದು. ಕೇಂದ್ರ ಕಚೇರಿಗೆ ಶೀಘ್ರದಲ್ಲಿಯೇ ಸ್ಥಳ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು.
ಪ್ರತಿಭಾ ಪುರಸ್ಕಾರ:
ವರದಿ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕಗಳಿಸಿದ ರಿಷಬ್ ನಾೖಕ್, ನಿಲಿಷ್ಕಾ ಕೆ.,ಸಾನ್ವಿ ರಾಧಾ ಎಸ್, ದಿಶಾಲ್ ಎ., ಪ್ರಾರ್ಥನಾ ಕೆ., ರಕ್ಷಾ ಎಂ.ಎಸ್, ತ್ರಿಷಾ, ಶ್ರೀಯಾ ಎಸ್.ಪಿಯುಸಿಯಲ್ಲಿ ಶೇ.75 ಕ್ಕಿಂತ ಅಧಿಕ ಅಂಕಗಳಿಸಿದ ಚಿಂತನಾ ಪಿ ಆರ್, ಲೋಶ್ನಿ,ಯಶಸ್ವಿ ಎ., ಭವಿಕ್ಷ್ ನಾೖಕ್ ಟಿ., ಪ್ರಹ್ಲಾದ್ ನಾೖಕ್, ಆದಿತ್ಯ ಬಂಟಪ್ಪ ನಾೖಕ್,ಶ್ರೀಶಾಮ್ ಎಸ್. ನಾೖಕ್, ಅನುಷಾ ಎಸ್.ಕೆ, ಶ್ರದ್ದಾ, ವೃದ್ದಿ.ಎಸ್,ಗ್ರೀಷ್ಮಾ ಡಿ.,ಲಿತಾಶಾ ಎಸ್.ನಾೖಕ್, ಚಿಂತನ್ ಕೆ.ಎಸ್ ರವರಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಶ್ರದ್ದಾಂಜಲಿ:
ಕಳೆದ ವರದಿ ವರ್ಷದಲ್ಲಿ ನಿಧನರಾದ ಸೊಸೈಟಿಯ ಸದಸ್ಯರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ನಿರ್ದೇಶಕರಾದ ರಘುನಾಥ ನಾೖಕ್,ಸದಾಶಿವ ನಾೖಕ್, ರಾಖೇಶ್ ಕುಮಾರ್, ಸುಧಾಕರ್ ನಾೖಕ್ ಕೆ.ಜಿ.,ಸುಜಿತ್ ಕುಮಾರ್, ಹರೀಶ್ ನಾೖಕ್,ನಿತಿನ್ ಚಂದ್ರ ಕಡಬ, ಹೇಮಲತಾ ಎಸ್. ನಾೖಕ್, ವನಿತಾ ನಾೖಕ್ ಎಸ್., ದಿನೇಶ್ ಕುಮಾರ್, ಉಮೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯರು ಸೊಸೈಟಿಯ ಅಭಿವೃದ್ದಿಗೆ ಪೂರಕವಾಗುವ ಸೂಕ್ತ ಸಲಹೆ ಸೂಚನೆ ನೀಡಿದರು. ಪಿಗ್ಮಿ ಸಂಗ್ರಾಹಕ ರಾಜೇಶ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ರತ್ನಾಕರ ನಾೖಕ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ ಲೆಕ್ಕಪರಿಶೋದನಾ ವರದಿ, ಲಾಭಾಂಶ ವಿಂಗಡಣೆಯ ಮಾಹಿತಿ ನೀಡಿದರು. ಕಡಬ ಶಾಖಾ ವ್ಯವಸ್ಥಾಪಕಿ ಶೃತಿಕಾ ಕೆ.ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಕವನ್ ನಾೖಕ್ ವಂದಿಸಿದರು. ಪುತ್ತೂರು ಕಛೇರಿಯ ಅಕೌಂಟೆಂಟ್ ಜಲಜಾಕ್ಷಿ, ಮಂಗಳೂರು ಶಾಖಾ ವ್ಯವಸ್ಥಾಪಕಿ ಜಯಲಕ್ಷ್ಮೀ, ಕೊಕ್ಕಡ ಶಾಖಾ ವ್ಯವಸ್ಥಾಪಕ ಸಂದೇಶ್, ಸುಳ್ಯ ಶಾಖಾ ವ್ಯವಸ್ಥಾಪಕಿ ಪ್ರತಿಭಾ, ಕಛೇರಿ ಸಹಾಯಕರಾದ ತನುಜಾ, ಹರ್ಷಿತ್,ಶೃತಿ ಯು. ನಾೖಕ್ ವಿಜೇತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ನಂದನ್ ಕುಮಾರ್, ಕಾರ್ತಿಕ್, ಗಣೇಶ್, ಯತೀನ್, ಧನುಶ್, ಪ್ರದಿತ್, ಧೀರಜ್, ಅವಿನಾಶ್ ಪಿಗ್ಮಿ ಸಂಗ್ರಾಹಕರಾದ ಸೌಮ್ಯ ಪ್ರವೀಣ್, ಮನೋರಮಾ, ಬಬಿತಾ, ಅಭಿಲಾಷ್, ಹೇಮಲತಾ ಹಾಗೂ ಗೀತಾ ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

ನಮ್ಮ ಸೊಸೈಟಿಯ ಬೆಳವಣಿಗೆಗೆ ಹಾಗೂ ಯಶಸ್ಸಿಗೆ ಕಾರಣಕರ್ತರಾದ ಸರ್ವಸದಸ್ಯರು,ಆಡಳಿತ ಮಂಡಳಿ ನಿರ್ದೇಶಕರು,ಸಲಹೆಗಾರರು,ಸಂಸ್ಥೆಯ ಸಿಬ್ಬಂದಿ ವರ್ಗದವರು,ಗ್ರಾಹಕರು,ಕಾನೂನು ಸಲಹೆಗಾರರು,ಮೌಲ್ಯಮಾಪಕರು ಹಾಗೂ ನಮ್ಮೊಂದಿಗೆ ಕೈ ಜೋಡಿಸಿದ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಸಹಕಾರಿ ಇಲಾಖೆಯ ಅಧಿಕಾರಿ ವರ್ಗದವರಿಗೆ ಕೃತಜ್ಞತೆಗಳು. ನಿಮ್ಮಲ್ಲರ ಸಹಕಾರ ನಮ್ಮೊಂದಿಗೆ ನಿರಂತರವಾಗಿರಲಿ ಎಂದು ಆಶಿಸುತ್ತ ಸಂಸ್ಥೆಯನ್ನು ಇನ್ನಷ್ಟು ಸದೃಢತೆಯಲ್ಲಿ ಮುನ್ನಡೆಸಲು ನಿಮ್ಮ ಸಹಕಾರ ಹೀಗೇ ಇರಲಿ. ಸಭೆಯಲ್ಲಿ ಸಂಸ್ಥೆಯ ಅಭಿವೃದ್ದಿಗೆ ಪೂರಕವಾಗಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿದ್ದು ಅದನ್ನು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಅನುಮೊದಿಸಿ ಅಳವಡಿಸಿಕೊಳ್ಳಲಾಗುವುದು ಎಂದರು.
ಸಂತೋಷ್ ಕುಮಾರ್, ಅಧ್ಯಕ್ಷರು.

ನಮ್ಮ ಸಂಸ್ಥೆಯು ಪ್ರಸ್ತುತ ಕೇಂದ್ರ ಕಛೇರಿ ಸೇರಿ 5 ಶಾಖೆಗಳನ್ನು ಹೊಂದಿದ್ದು ಪಾರದರ್ಶಕ ವ್ಯವಹಾರಕ್ಕಾಗಿ ಎಲ್ಲಾ ಶಾಖಾ ಕಛೇರಿ ಗಣಕೀಕೃತ ಗೊಂಡಿದೆ.ಸದಸ್ಯರ ಆರ್ಥಿಕ ಬೆಳವಣಿಗೆಗೆ ಜಾಮೀನು ಸಾಲ,ಸ್ಥಿರಾಸ್ಥಿ ಅಡವಿನ ಸಾಲ,ಸ್ವ ಉದ್ಯೋಗ ಸಾಲ,ವೇತನಾಧಾರಿತ ಸಾಲ,ಠೇವಣಿ ಸಾಲ, ಮನೆ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಸಾಲ, ಪಿಗ್ಮಿ ಸಾಲ, ಚಿನ್ನಾಭರಣ ಸಾಲವನ್ನು ನೀಡುತ್ತಿದೆ.ಯಶಸ್ವಿನಿ ಯೋಜನೆ ನಮ್ಮಲ್ಲಿ ಲಭ್ಯವಿದ್ದು ಇದರ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳ ಬಹುದಾಗಿದೆ.18 ವರ್ಷ ಮೇಲ್ಪಟ್ಟ ಸಮಾಜ ಬಾಂಧವರು ಸೊಸೈಟಿಯ ಸದಸ್ಯತ್ವ ಪಡೆಯುವಂತೆ ಮತ್ತು ವಿಳಾಸ ಬದಲಾವಣೆ ಆಗಿದ್ದಲ್ಲಿ ಹೊಸ ವಿಳಾಸ ನೀಡಿ ಕೆವೈಸಿ ಮಾಡಿಕೊಳ್ಳುವಂತೆ ವಿನಂತಿಸಿದರು. ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನಷ್ಟು ಅಭಿವೃದ್ದಿ ಹೊಂದಬೇಕು ಇದಕ್ಕೆ ಸರ್ವಸದಸ್ಯರ ಸಹಕಾರ ಅಗತ್ಯವಾಗಿದೆ.
ಸುಧಾಕರ ಕೆ.ಪಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ










