ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

0

45.78 ಕೋಟಿ ರೂ. ವ್ಯವಹಾರ, 14.08 ಲಕ್ಷ ರೂ. ನಿವ್ವಳ ಲಾಭ, ಶೇ. 15 ಡಿವಿಡೆಂಡ್- ಜಗನ್ನಾಥ ರೈ


ಪುತ್ತೂರು: ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ. 20 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಮಾತನಾಡಿ, ಬಂಟಸಿರಿ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ರೂ, 45,78,38,817 ವಾರ್ಷಿಕ ವ್ಯವಹಾರ ಮಾಡಿದ್ದು, 7.31 ಕೋಟಿ ಠೇವಣಿ ಸಂಗ್ರಹವನ್ನು ಮಾಡಲಾಗಿದೆ. 7.89 ಕೋಟಿ ರೂ. ಸಾಲ ವಿತರಿಸಿ, 14.08 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರುಗಳಿಗೆ ಶೇ 15 ಡಿವಿಡೆಂಡ್ ನೀಡಲಾಗುವುದು, 2027ರ ಮಾರ್ಚ್ ಅಂತ್ಯಕ್ಕೆ ರೂ 10 ಕೋಟಿಯಷ್ಟು ಠೇವಣಿ ಸಂಗ್ರಹ ಮತ್ತು 10 ಕೋಟಿ ರೂ. ಸಾಲ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.


2013ರಲ್ಲಿ ಸ್ಥಾಪನೆ:
ಪುತ್ತೂರು ತಾಲೂಕಿನಲ್ಲಿ ಬಂಟ ಸಮುದಾಯದಿಂದ 2013 ರಲ್ಲಿ ಸ್ಥಾಪಿತವಾದ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ ಇದೀಗ 13 ನೇ ವರ್ಷದಲ್ಲಿ ಪ್ರಗತಿಯ ಪಥದಲ್ಲಿ ಮುನ್ನಡೆದು, ಸಹಕಾರ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ. ಈ ವರ್ಷ 15 ಶೇ. ಡಿವಿಡೆಂಡ್‌ನ್ನು ಸದಸ್ಯರುಗಳಿಗೆ ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಈಗಾಗಲೇ ಕಡಬ ತಾಲೂಕಿನ ಅಲಂಕಾರು, ಪುತ್ತೂರು ತಾಲೂಕಿನ ಈಶ್ವರಮಂಗಲ, ಹಾಗೂ ಸುಳ್ಯ ತಾಲೂಕಿನ ನಿಂತಿಕಲ್‌ನಲ್ಲಿ ಸಂಘದ ಶಾಖೆಗಳು ಅತ್ಯುತ್ತಮ ರೀತಿಯಲ್ಲಿ ವ್ಯವಹಾರ ಮಾಡುತ್ತಿದ್ದು, ಸೆ. 13 ರಂದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ-ರೆAಜದಲ್ಲಿ ಹೊಸ ಶಾಖೆಯನ್ನು ಆರಂಭಿಸಿದ್ದೇವೆ, ನಮ್ಮ ಎಲ್ಲಾ ಸದಸ್ಯರುಗಳು ಹಾಗೂ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ಎಲ್ಲಾ ನಿರ್ದೇಶಕರುಗಳು ಮತ್ತು ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಹಾಗೂ ಸಿಬ್ಬಂದಿ ವರ್ಗದ ಸಹಕಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.


ಆಡಳಿತ ಮಂಡಳಿಯ ನಿರ್ದೇಶಕರಾದ ಸಂಜೀವ ಆಳ್ವ ಹಾರಾಡಿ, ಬೂಡಿಯಾರ್ ರಾಧಾಕೃಷ್ಣ ರೈ, ಪುರಂದರ ರೈ ಮಿತ್ರಂಪಾಡಿ, ಚನಿಲ ತಿಮ್ಮಪ್ಪ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ವಿದ್ಯಾ ಪ್ರಸಾದ್ ಆಳ್ವ “ಆಳ್ವರಮನೆ” ಉಪ್ಪಳಿಗೆ, ಅನಿತಾ ಹೇಮನಾಥ ಶೆಟ್ಟಿ, ಬಾಲಕೃಷ್ಣ ರೈ ಅನಾಜೆ, ಶ್ರೀನಿವಾಸ ರೈ ನುಳಿಯಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ವರದಿ ವಾಚಸಿದರು. ಸಂಸ್ಥೆಯ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಸ್ವಾಗತಿಸಿ, ನಿರ್ದೇಶಕ ವಸಂತ ಕುಮಾರ್ ರೈ ದುಗ್ಗಳ ವಂದಿಸಿದರು. ಬಂಟಸಿರಿ ಸಂಸ್ಥೆಯ ಪ್ರಧಾನ ಕಚೇರಿಯ ಶ್ರಾವ್ಯಶ್ರೀ ರೈ ಪ್ರಾರ್ಥಿಸಿ, ನಿಂತಿಕಲ್ ಶಾಖೆಯ ವ್ಯವಸ್ಥಾಪಕಿ ರಕ್ಷಿತಾ ರೈ ಕಾರ್‍ಯಕ್ರಮ ನಿರೂಪಿಸಿದರು. ಈಶ್ವರಮಂಗಲ ಶಾಖಾ ವ್ಯವಸ್ಥಾಪಕಿ ಪ್ರೇಮ ಎಸ್ ರೈ, ಅಲಂಕಾರು ಶಾಖಾ ವ್ಯವಸ್ಥಾಪಕಿ ಸುಮತಿ ರೈ, ಸಿಬ್ಬಂಧಿ ತೇಜಸ್ ರೈ, ಬೆಟ್ಟಂಪಾಡಿ ಶಾಖೆಯ ವ್ಯವಸ್ಥಾಪಕ ಬ್ರಿಜೇಶ್ ಶೆಟ್ಟಿ, ಸಿಬ್ಭಂಧಿ ಭವ್ಯಶ್ರೀ ರೈ ರವರು ಸಹಕರಿಸಿದರು.


ಸಂಘದ ಸದಸ್ಯರುಗಳಾದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಉದಯ ರೈ ಮಾದೋಡಿ, ನಾರಾಯಣ ರೈ ಪರ್ಪುಂಜ-ಬಾರಿಕೆ, ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ವಿಜಯಪ್ರಸಾದ್ ಆಳ್ವ ಮತ್ತಿತರರು ಸಲಹೆ ಸೂಚನೆ ನೀಡಿದರು. ಸಮಾರಂಭದಲ್ಲಿ ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯಕ್, ಮೋಹನ್ ರೈ ನರಿಮೊಗರು, ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪ ರೈ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಬಂಟಸಿರಿ ಅದ್ಬುತ ಸಾಧನೆ
ಬಂಟಸಿರಿ ಸಹಕಾರ ಸಂಸ್ಥೆಯು ಉತ್ತಮ ಸಾಧನೆಯನ್ನು ಮಾಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಅದ್ಬುತ ಪ್ರಗತಿ ಸಾಧಿಸಿದೆ. ಸಂಸ್ಥೆಗೆ ಉತ್ತಮ ಆಡಳಿತ ಮಂಡಳಿ ಇದೆ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರು ಹೆಚ್ಚಿನ ಮುತುವರ್ಜಿಯಿಂದ ಕೆಲಸ ನಿರ್ವಹಿಸಿ, ಶೇ. 99.5 ಸಾಲ ವಸೂಲಾತಿ ಸಾಧ್ಯವಾಗಿದೆ ಎಂದರು ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಹಕಾರದಲ್ಲಿ ಸಂಸ್ಥೆಯು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ.
-ನುಳಿಯಾಲು ಜಗನ್ನಾಥ ರೈ, ಅಧ್ಯಕ್ಷರು

ಸಹಕಾರ ಕ್ಷೇತ್ರದಲ್ಲಿ ಸಾಧನೆ
ಸಹಕಾರ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಬಂಟಸಿರಿ ಸಹಕಾರ ಸಂಸ್ಥೆಯು ಸಹಕಾರ ತತ್ವ ಹಾಗೂ ಸಿದ್ಧಾಂತದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಸಹಕಾರ ಬಂಧುಗಳ ಪೂರ್ಣ ಸಹಕಾರ ಸಂಸ್ಥೆಗೆ ದೊರೆತಿದೆ.
ದಯಾನಂದ ರೈ ಮನವಳಿಕೆಗುತ್ತು ಉಪಾಧ್ಯಕ್ಷರು

ಗ್ರಾಹಕರಿಗೆ ಉತ್ತಮ ಸೇವೆ
ಬಂಟಸಿರಿ ಸಹಕಾರ ಸಂಸ್ಥೆಯಲ್ಲಿ ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಸಾಲವನ್ನು ನೀಡುತ್ತೀವೆ. ಈ ಬಾರಿ 99.5 ಶೇ ಸಾಲ ವಸೂಲಾತಿ ಆಗಿದ್ದು, ಬ್ಯಾಂಕ್ `ಎ’ ಗ್ರೇಡ್ ಪಡೆದಿರುವುದು ಗ್ರಾಹಕರ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯು ಮತ್ತಷ್ಟು ಅಭಿವೃದ್ಧಿ ಆಗಲಿದೆ.
ಸತೀಶ್ ರೈ ನಡುಬೈಲು, ಮುಖ್ಯಕಾರ್‍ಯನಿರ್ವಹಣಾಧಿಕಾರಿ

LEAVE A REPLY

Please enter your comment!
Please enter your name here