







ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ಇವರ ಆಶ್ರಯದಲ್ಲಿ ಪದುವ ಪ್ರೌಢಶಾಲೆ ನಂತೂರು ಮಂಗಳೂರು ಇಲ್ಲಿ ಸೆ.18ರಂದು ನಡೆದ 14ರ ವಯೋಮಾನದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.


ತಂಡದ ಆಟಗಾರರಾದ ಧನುಷ್ 8ನೇ (ಜೀವಾನಂದ ಮತ್ತು ಪ್ರೇಮಾವತಿ ಪಿ.ದಂಪತಿ ಪುತ್ರ) ಧೀಮಂತ್ 8ನೇ (ಸತೀಶ್ ಕುಮಾರ್ ಮತ್ತು ಚಂದ್ರಕಲಾ ದಂಪತಿ ಪುತ್ರ), ಸಾತ್ವಿಕ್ ಎ.ಎಸ್.8ನೇ (ಸದಾಶಿವ ಮತ್ತು ರೋಹಿಣಿ ಆನ ದಂಪತಿ ಪುತ್ರ) ಅವರು ಮೈಸೂರು ವಿಭಾಗ ಮಟ್ಟಕ್ಕೆ ದ.ಕ.ಜಿಲ್ಲಾ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮಾ ಬಿ., ದಿವ್ಯಾ ಪಿ.ಎನ್., ಕಿಶನ್ರಾಜ್ ಹಾಗೂ ರಾಘವ ತರಬೇತಿ ನೀಡಿದ್ದಾರೆ.













