







ಪುತ್ತೂರು: ರಾಸ್ಬೇರಿ ಪೈ ಫೌಂಡೇಶನ್ ಇದರ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಕೂಲೆಸ್ಟ್ ಪ್ರಾಜೆಕ್ಟ್ಸ್ ಇಂಡಿಯಾ ವಿಜ್ಞಾನ ಸಮಾವೇಶದಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಮೂರು ತಂಡಗಳ 12 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.


ಇದರಲ್ಲಿ 10ನೇ ತರಗತಿಯ ಶ್ರಾವಣಿ ಪಿ. ಎಲ್ (ಪಿ ಲೋಕೇಶ್ವರಾ ಮತ್ತು ರಶ್ಮಿ ಕೆ. ಎಸ್ ದಂಪತಿ ಪುತ್ರಿ) ಮತ್ತು ಸೃಷ್ಟಿ ಎಂ. ಸಾಲಿಯಾನ್ (ಮಹೇಶ್ ಪಿ ಮತ್ತು ಸುಜಾತ ದಂಪತಿ ಪುತ್ರಿ) ಇವರು Med4U, ಎಂಬ ಪ್ರಾಜೆಕ್ಟ್ ನ್ನು ಈ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಪ್ರಸ್ತುತ ಪಡಿಸಿ “Mobile App” ವಿಭಾಗದಲ್ಲಿ ಬೆಸ್ಟ್ ಫೇವರೆಟ್ ಅವಾರ್ಡ್ ನ್ನು ಪಡೆದುಕೊಂಡಿರುತ್ತಾರೆ. ಈ ತಂಡದಲ್ಲಿ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಮೂರು ವಿದ್ಯಾರ್ಥಿನಿಯರು ಭಾಗವಹಿಸಿರುತ್ತಾರೆ.



9ನೇ ತರಗತಿಯ ವಿದ್ಯಾರ್ಥಿಗಳಾದ ಮೇಧಾ ಭಟ್ ( ಕೃಷ್ಣಮೂರ್ತಿ ಪಟ್ಲ ಮತ್ತು ಶ್ವೇತಾ ಸರಸ್ವತಿ ಬಂಗಾರಡ್ಕ ದಂಪತಿ ಪುತ್ರಿ ), ಮಾನ್ವಿ ಕಜೆ(ಡಾ.ಚರಣ್ ಕಜೆ ಮತ್ತು ರಮ್ಯಾ ಕಜೆ ದಂಪತಿ ಪುತ್ರಿ ), ಪ್ರಣಮ್ಯ( ಜಯಪ್ರಕಾಶ್ ಬಿ ಮತ್ತು ಮಾಧವಿ ಕೆ. ಎ ದಂಪತಿ ಪುತ್ರಿ ), ಆರಾಧನಾ(ಡಾ. ಪ್ರಕಾಶ್ ಬಿ.ಯವರ ಪುತ್ರಿ ), ಸುಧೀಕ್ಷಾ ಎಸ್ ಭಟ್( ರಾಘವೇಂದ್ರ ಪ್ರಸಾದ್ ಮತ್ತು ಶ್ರುತಿ ಎಂ.ಎಸ್ ದಂಪತಿ ಪುತ್ರಿ ) FER-26:An Automated Fire- Extinguishing Robot ಮತ್ತು 8ನೇ ತರಗತಿಯ ಸನ್ಮಿತ್ ಬಿ (ಸಂತೋಷ್.ಬಿ ಮತ್ತು ಸಂಧ್ಯಾ ಎ ದಂಪತಿ ಪುತ್ರ) ಧೀರೆನ್. ಜಿ.ಬಡೆಕರ್ (ರಮೇಶ್ ಜಿ ಮತ್ತು ದಿವ್ಯ ಕೆ. ಎನ್ ದಂಪತಿ ಪುತ್ರ) ಅನಿಕೇತ್ ರೈ (ಪ್ರಶಾಂತ್ ರೈ ಹೆಚ್ ಮತ್ತು ವಾಣಿಶ್ರೀ ರೈ ದಂಪತಿ ಪುತ್ರ ) ಕೆ ಅಭಿನವ ನಾರಾಯಣ ಜೋಯಿಷ (ಕೆ. ಎಸ್ ವೆಂಕಟರಮಣ ಜೋಯಿಷರವರ ಮತ್ತು ಅನ್ನಪೂರ್ಣೇಶ್ವರಿ.ಎಂ ದಂಪತಿ ಪುತ್ರ ) Eco Friendly Smart City ಎಂಬ ವಿಜ್ಞಾನ ಯೋಜನೆಯನ್ನು ಪ್ರಸ್ತುತ ಪಡಿಸಿ ರಾಷ್ಟ್ರಮಟ್ಟದಲ್ಲಿ ಪ್ರಮಾಣ ಪತ್ರ ಪಡೆದಿರುತ್ತಾರೆ.
ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ರಾಸ್ಬೇರಿ ಪೈ ಫೌಂಡೇಶನ್ ಕೂಲೆಸ್ಟ್ ಪ್ರಾಜೆಕ್ಟ್ ಎಂಬ ಸಮಾವೇಶವನ್ನು ಸುಮಾರು 41 ವಿವಿಧ ದೇಶಗಳಲ್ಲಿ ಆಯೋಜಿಸುತ್ತಿದ್ದು, ನಮ್ಮ ದೇಶದಲ್ಲಿ ಸೆಪ್ಟೆಂಬರ್ 19 ರಂದು ಹೈದರಾಬಾದಿನ ಸೈಬರ್ ಗಾರ್ಡನ್ ಕನ್ವೆನ್ಷನ್ ಸೆಂಟರ್ ಜುಬಿಲಿ ಎನ್ ಕ್ಲೇವ್ ಹೈಟೆಕ್ ಸಿಟಿಯಲ್ಲಿ ನಡೆಯಿತು.

ಇದರಲ್ಲಿ ವಿದ್ಯಾರ್ಥಿಗಳು ಒಟ್ಟು ಏಳು ವಿಭಾಗಗಳಲ್ಲಿ ಭಾಗವಹಿಸಬಹುದಾಗಿದ್ದು ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಮೂರು ಯೋಜನೆಗಳಿಗೆ ಬಹುಮಾನ ನೀಡಲಾಗುತ್ತಿದೆ. ಈ ವರ್ಷ ದ್ವಿತೀಯ ಬಾರಿಗೆ ನಮ್ಮ ದೇಶದಲ್ಲಿ ನಡೆದ ಈ ರಾಷ್ಟ್ರೀಯ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಎರಡು ವಿದ್ಯಾಸಂಸ್ಥೆಗಳು ಮಾತ್ರ ಭಾಗವಹಿಸಿ ಬಹುಮಾನ ಗಳಿಸಿರುವುದು ವಿಶೇಷ ಸಾಧನೆಯಾಗಿದೆ. ಇದಕ್ಕಾಗಿ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಿದೆ.
Med4U ಪ್ರಾಜೆಕ್ಟ್ ಗೆ ಪುತ್ತೂರಿನವರೇ ಆದ ಅಮೆರಿಕದಲ್ಲಿ ನೆಲೆಸಿರುವ ಶ್ರೀಯುತ ಆನಂದ ವರ್ಧನರವರು ಒಂದು ವರ್ಷದಿಂದ ತರಬೇತಿ ನೀಡಿರುತ್ತಾರೆ. ಮಾತ್ರವಲ್ಲದೆ ಯೋಜನೆಗೆ ಬೇಕಾದ ಸಾಫ್ಟ್ ವೇರ್ ಲೈಸೆನ್ಸ್ ಮತ್ತು ಬೆಳವಣಿಗೆಗೆ ಸಹಾಯ ಮಾಡಿರುತ್ತಾರೆ.
ಶ್ರೀಮತಿ ವಸಂತಿ ಕೆ. ನಿವೃತ್ತ ವಿಜ್ಣಾನ ಶಿಕ್ಷಕಿ , ಶಾಲಾ ಆಡಳಿತ ಮಂಡಳಿ ಮತ್ತು ಕಂಪ್ಯೂಟರ್ ಶಿಕ್ಷಕಿ ಹೇಮಾ ಭಟ್ ಇವರ ನಿರಂತರ ಮಾರ್ಗದರ್ಶನ ಹಾಗೂ ಪ್ರಾಂಶುಪಾಲೆ ಸಿಂಧು ವಿ. ಜಿ ಇವರ ಪ್ರೋತ್ಸಾಹದಿಂದ ಈ ಯಶಸ್ಸು ಲಭಿಸಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.










