ಆರ್ಲಪದವಿನಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಶಿಬಿರ- ಸುಮಾರು 250 ಮಂದಿಯಿಂದ ಶಿಬಿರದ ಸದುಪಯೋಗ

0

ನಿಡ್ಪಳ್ಳಿ:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪಾಣಾಜೆ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘ ಇವುಗಳ ಸಹಯೋಗದೊಂದಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಸೆ. 20 ರಂದು ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾ ಭವನದಲ್ಲಿ ಜರುಗಿತು.ಶಂಕರಿ ಭಟ್ ಕಾಕೆಕೊಚ್ಚಿಯವರು ದೀಪ ಪ್ರಜ್ವಲನೆ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಪುತ್ತಿಲ ಪರಿವಾರ ಪಾಣಾಜೆ ಗ್ರಾಮ ಸಮಿತಿಯು ಮೂರು ವರ್ಷಗಳಲ್ಲಿ ನಿರಂತರ ಸೇವೆಗಳನ್ನು ನೀಡುತ್ತಿದ್ದು ಈ ತನಕ ಸುಮಾರು 6.5 ಲಕ್ಷ ರೂಗಳನ್ನು ವೈದ್ಯಕೀಯ, ಶೈಕ್ಷಣಿಕ, ಧಾರ್ಮಿಕ,ಸಾಮಾಜಿಕ ಸೇವೆಗಳಿಗೆ ಒಂದು ಗ್ರಾಮದ ಸಾಮಾನ್ಯ ಕಾರ್ಯಕರ್ತರು ನೀಡಿದ್ದು ಈ ಗ್ರಾಮ ಸಮಿತಿಯು ನಮ್ಮ ಟ್ರಸ್ಟ್ ನ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ ಎಂದು ಹೇಳಿ  ಗ್ರಾಮ ಸಮಿತಿಗೆ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಟ್ರಸ್ಟ್ ನ ಅದ್ಯಕ್ಷ  ಶ್ರೀರಾಮ್ ಭಟ್ ಪಾತಾಳ,ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಪ್ರಜ್ವಲ್ ಘಾಟೆ,ಹರೀಶ್ ಪೂಜಾರಿ ಮರುವಾಳ, ಪಾಣಾಜೆ ಹಾಲು ಉತ್ಪಾದರಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ, ಟ್ರಸ್ಟ್ ನ ಕೋಶಾಧಿಕಾರಿ ಸುಜಿತ್ ಕಜೆ , ಗ್ರಾಮ ಸಮಿತಿ ಅದ್ಯಕ್ಷ ಶ್ರೀನಿವಾಸ ಕುಲಾಲ್ ಉಡ್ಡಂಗಳ ಹಾಗೂ ಗ್ರಾಮದ ಪ್ರಮುಖರಾದ ಜಗನ್ನಾಥ ರೈ ಕಡಮಾಜೆ,ಸದಾಶಿವ ಭಟ್ ಪಾಲ್ತಮೂಲೆ,ರಾಮಚಂದ್ರ ಮಣಿಯಾಣಿ ಪಡ್ಯಂಬೆಟ್ಟು,ರಮಾನಾಥ ರೈ ಪಡ್ಯಂಬೆಟ್ಟು,ಪಾಣಾಜೆ ಗ್ರಾಮ, ಪಂಚಾಯತ್ ಮಾಜಿ ಸದಸ್ಯೆ  ಯಶೋಧ ಉಡ್ಡಂಗಳ ಉಪಸ್ಥಿತರಿದ್ದರು.ಪಾಣಾಜೆ ಹಾಲು ಉತ್ಪಾದಕ ರ ಸಹಕಾರಿ ಸಂಘದ ಅದ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ವಸಂತ ಭರಣ್ಯ ವಂದಿಸಿದರು, ಪ್ರದೀಪ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.

ಸುಮಾರು 250 ಮಂದಿ ಈ ಶಿಬಿರದ ಸದುಪಯೋಗ ಪಡೆದಿದ್ದು ಪಾಣಾಜೆ ಗ್ರಾಮ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದ  ಜವಾಬ್ದಾರಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here