ಮನವಳಿಕೆಗುತ್ತುವಿನ ಕಂಬಳ ಗದ್ದೆಯಲ್ಲಿ ಬಂಟೆರೆ ಕೆಸೆರ್ ಡೊಂಜಿ ಕುಸಲ್ ಕಾರ್ಯಕ್ರಮ

0

ಎಲ್ಲಾ ಧರ್ಮದ ಜಾತಿ ಸಂಘಟನೆಯವರು ನಿವೇಶನ ಗುರುತಿಸಿಕೊಟ್ಟರೇ ನಿವೇಶನ ಮಂಜೂರು ಮಾಡಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಆಶೋಕ ಕುಮಾರ್ ರೈ

ಆಲಂಕಾರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿ ಮತ್ತು ಪುತ್ತೂರು ತಾಲೂಕು ಬಂಟರ ಸಂಘ ಇದರ ಮಾರ್ಗದರ್ಶನದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘದ ಸಹಯೋಗದೊಂದಿಗೆ ಆಲಂಕಾರು ವಲಯ ಬಂಟರ ಸಂಘ ಆಲಂಕಾರು ಇವರ ಆಶ್ರಯದಲ್ಲಿ ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮ ಪೆರಾಬೆ ಗ್ರಾಮದ ಮನವಳಿಕೆಗುತ್ತುವಿನ ಕಂಬಳಗದ್ದೆಯಲ್ಲಿ ನಡೆಯಿತು.

ಬೆಳಿಗ್ಗೆ ಮನವಳಿಕೆಗುತ್ತುವಿನ ಯಜಮಾನ ರಮಾನಾಥ ರೈ ಮನವಳಿಕೆಗುತ್ತು ಧರ್ಮ ಚಾವಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಮಾಜಿ ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಂಟ ಸಮಾಜದ ಆಚಾರ ವಿಚಾರಗಳನ್ನು ನಮ್ಮ‌ ಮಕ್ಕಳಿಗೆ ತಿಳಿಸುವ ಕೆಲಸ ಕಾರ್ಯಗಳನ್ನು ಮಾಡಬೇಕು .ತುಳುನಾಡಿನ ಸಂಸ್ಕೃತಿಯನ್ನು ಸಾರುವ ಕೆಸರ್ ಡೊಂಜಿ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿರುವುದು ಬಹಳ ಸಂತೋಷದ ವಿಚಾರ.ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮಕ್ಕೆ ಮನವಳಿಕೆಗುತ್ತು ಕಂಬಳಗದ್ದೆಯಲ್ಲಿ ಸೇರಿರುವವರನ್ನು ಕಂಡ ನಮಗೆ ಬಹಳ‌ ಸಂತೋಷ ವಾಗಿದೆ.ಹಿಂದೆ ಗದ್ದೆಯಲ್ಲಿ ಎಲ್ಲಾರು ಕೆಲಸ ಮಾಡಿ ಎಲ್ಲಾರು ಆರೋಗ್ಯವಾಗಿದ್ದರು ಆದರೆ ಇಂದು ಮಕ್ಕಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಗಳಲ್ಲಿ ಕಾಲ ಕಳೆಯವುದನ್ನು ನಾವು ನೋಡುತ್ತಿದ್ದೇವೆ.ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮಗಳ ಮೂಲಕ ಗದ್ದೆಯಲ್ಲಿ ಕೆಲಸ ಮಾಡುವ ನೆನಪುಗಳು ಬರುತ್ತದೆ ಎಂದು ತಿಳಿಸಿ ಗದ್ದೆಗೆ ಹಾಲು ಎರೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಲಂಕಾರು ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೇಸಪ್ಪ‌ ರೈ .ಕೆ ಯವರು ಮಾತನಾಡಿ ಆಲಂಕಾರು ವಲಯ ಬಂಟರ ಸಂಘ ಕಳೆದ 25 ವರ್ಷಗಳಿಂದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿ,ಮನವಳಿಕೆಗುತ್ತು ಸಾಂಪ್ರದಾಯಿಕವಾಗಿ ದೈವ ದೇವರುಗಳನ್ನು ಆರಾಧಿಸಿಕೊಂಡು ಬರುತ್ತಿರುವ ಗುತ್ತು ಎಂದರು.

ಏಷ್ಯನ್ ಚಾಂಪಿಯನ್ ಶಿಫ್ ರನ್ನರ್ ಆಫ್ ಪ್ರಶಸ್ತಿ ಪುರಸ್ಕೃತರಾದ ನಿಖಿಲ್ ಎಲ್.ಶೆಟ್ಟಿ ಕೇವಳ ಪಟ್ಟೆ ಯವರು ಸೃಜನ್ ರೈ ಪರಾರಿಗುತ್ತು ರವರಿಗೆ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿದರು ಸಭೆಯ ಅಧ್ಯಕ್ಷತೆಯನ್ನು ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆಗುತ್ತು ಅಧ್ಯಕ್ಷತೆ ವಹಿಸಿ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಿಳಿಸಿದರು. ಮಧ್ಯಾಹ್ನ ಸಭಾಕಾರ್ಯಕ್ರಮ ನಡೆಯಿತು.

ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಮನವಳಿಕೆಗುತ್ತು ಕಂಬಳಗದ್ದೆಯಲ್ಲಿ ಕೆಸರ್ ಡೊಂಜಿ ಕಾರ್ಯಕ್ರಮ ಬಹಳ ಸುಂದರವಾಗಿ ಆಯೋಜನೆ ಗೊಂಡಿದೆ ಇದಕ್ಕೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿ.ಬಂಟ ಸಮಾಜವು ಸಮಾಜದಲ್ಲಿ ದೊಡ್ಡ ಸಮಾಜವಾಗಿದ್ದು ಯಾವುದೇ ಒಂದು ನಿರ್ಧಾರ ಮಾಡಿದ್ರೆ ಅದು ನಮ್ಮ ಪರವಾಗಿರುತ್ತದೆ ಮತ್ತು ಎಲ್ಲಾ ಜಾತಿ ಧರ್ಮದವರು ಬಂಟ ಸಮಾಜ ಭಾಂಧವರನ್ನು ಗೌರವಿಸುತ್ತಾರೆ. ಬಂಟರು ದೇಶ ವಿದೇಶಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಬಂಟ ಸಮಾಜಕ್ಕೆ ಕಳೆದ ಮೂರು ವರ್ಷಗಳಿಂದ ಪ್ರಯತ್ನ ಮಾಡಿ ಪುತ್ತೂರಿನಲ್ಲಿ 5.50 ಎಕ್ರೆ ಜಾಗ ಮಾಡಿಸಿಕೊಟ್ಟಿದ್ದೇನೆ ಮತ್ತು ಅದರ ಮೌಲ್ಯವನ್ನು ಕೂಡ ಸರಕಾರಕ್ಕೆ ಸ್ವತ: ನಾನೇ ಕಟ್ಟಿದ್ದೇನೆ ಎಂದು ತಿಳಿಸಿ ಪುತ್ತೂರುಗೆ ಮೆಡಿಕಲ್ ಕಾಲೇಜು, ತುಳುಭಾಷೆಯನ್ನು ರಾಜ್ಯದ ಅಧಿಕೃತ 2 ನೇ ಭಾಷೆಯನ್ನಾಗಿ ಮಾಡಿದ್ದೇನೆ ಎಂದು ತಿಳಿಸಿ ಎಲ್ಲಾ ಧರ್ಮದ ಜಾತಿ ಸಂಘಟನೆಗಳು ಅರ್ಹ ನಿವೇಶನಗಳನ್ನು ಗುರುತಿಸಿಕೊಟ್ಟರೆ ನಿವೇಶನ ಮಂಜೂರು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿ ಶಾಸಕರು ಬಾಲ್ಯದಲ್ಲಿ ಆಲಂಕಾರಿಗೆ ಬಂದು ಬೀಡಿ ಬ್ರೆಂಚ್ ನಲ್ಲಿ ಬೀಡಿ ಕಟ್ಟುವವರ ಬೀಡಿಗಳನ್ನು ತೆಗೆದುಕೊಂಡ ಘಟನೆಯನ್ನು ನೆನೆಪಿಸಿ ಬಂಟ ಸಮಾಜದಲ್ಲಿ ಅನೇಕ ಮಂದಿ ಶಾಸಕರಾಗಿದ್ದರೆ ಆದರೆ ಬಂಟಸಮಾಜಕ್ಕೆ ಕೊಡುಗೆ ಅತ್ಯಲ್ಪ ಎಂದು ತಿಳಿಸಿದರು.



ಸಭೆಯಲ್ಲಿ ಬಂಟ ಸಮಾಜದ ಅನೇಕ ಪ್ರಮಖರು ಉಪಸ್ಥಿತರಿದ್ದರು ನಂತರ ಸಂಜೆ ಸಮಾರೋಪ ಸಮಾರಂಭ ಬಹುಮಾನ ವಿತರಣೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಯವರು ವಹಿಸಿ ಮಾತನಾಡಿ ಮನವಳಿಕೆಗುತ್ತು ಕಂಬಳ ಗದ್ದೆಯಲ್ಲಿ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದಲ್ಲಿ ಪುತ್ತೂರು ಮತ್ತು ಕಡಬ ಎರಡು ತಾಲೂಕಿನ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮ ಬಹಳ ಶಿಸ್ತಿನಿಂದ ಬಹಳ ಯಶಸ್ವಿಯಾಗಿ ನಡೆದಿದೆ. ಸಮಾಜ ಸಂಘಟನೆಯಾಗದಿದ್ದರೆ ಅಧು ಕ್ಷೀಣ ಆಗುತ್ತದೆ ಎಂದು ತಿಳಿಸಿ ಪುತ್ತೂರು ತಾಲೂಕು ಬಂಟರ ಸಂಘ ಆಯೋಜನೆ ಮಾಡುತ್ತಿರುವ ಎಲ್ಲಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ತಿಳಿಸಿದರು. ಆಯೋಜನಾ ಸಮಿತಿಯ ಗೌರವಾಧ್ಯಕ್ಷರು ಪುತ್ತೂರು ತಾಲ್ಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ರವರು ಮಾತನಾಡಿ ಪುತ್ತೂರು, ಕಡಬ ತಾಲ್ಲೂಕಿನ ಎಲ್ಲಾ ವಲಯಗಳ ಬಂಟ ಸಮಾಜ ಬಾಂಧವರನ್ನು ಒಂದೇ ಸೂರಿನಡಿ ಸೇರಿಸಬೇಕೆನ್ನುವ ದೃಷ್ಟಿಯಿಂದ ಮನವಳಿಕೆಗುತ್ತು ಕಂಬಳಗದ್ದೆಯಲ್ಲಿ ಕೆಸರ್ ಡೊಂಜಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಇದಕ್ಕೆ ಸಹಕರಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.



ಕಾರ್ಯಕ್ರಮದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ರೈ ಬುಡಿಯಾರು,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ
ಚನಿಲ ತಿಮ್ಮಪ್ಪ ಶೆಟ್ಟಿ,ಸೀತಾರಾಮ ಶೆಟ್ಟಿ ಕೈಕಾರ ,ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಶ್ರೀಮಾತಾ, ತುಳುನಾಡಿನ ಸಂಸ್ಕಾರ,ಸಂಘಟನೆಯ ಕುರಿತು ಸಂರ್ದಭೋಚ್ಚಿತವಾಗಿ ಮಾತನಾಡಿದರು.

ಮದ್ಯಾಹ್ನ ಸಭಾಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರ ತುಳುಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಡಳಿತ ಭಾಷೆಯನ್ನಾಗಿ ಮಾಡಲು ಶ್ರಮಿಸಿದ ಪುತ್ತೂರಿನ ಶಾಸಕರಾದ ಆಶೋಕ್ ಕುಮಾರ್ ರೈ ಯವರನ್ನು,ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮಕ್ಕೆ ಗದ್ದೆಯನ್ನು ನೀಡಿದ ಗೀತಾ ಶ್ಯಾಮಪ್ರಸಾದ್ ರೈ,ಅಚ್ಚುಕಟ್ಟಾಗಿ ಕ್ರೀಡಾಕೂಟವನ್ನು ನಡೆಸಿಕೊಟ್ಟ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ ರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳಿಗ್ಗೆ, ಮದ್ಯಾಹ್ನ,ಸಂಜೆ ಸಭಾ ಕಾರ್ಯಕ್ರಮದಲ್ಲಿ ರಾಮಮೋಹನ ರೈ ಸುರುಳಿ, ಕರುಣಾಕರ ರೈ ದೇರ್ಲ,ಆರುವಾರ ಬಾಳಿಕೆ ನೀರಾಜ್ ಕುಮಾರ್ ರೈ,ಸೀತಾರಾಮ. ರೈ ಕೇವಳ,ಶಾಂತರಾಮ ರೈ ಕುಂತೂರು ಗುತ್ತು,ರಾಧಾಕೃಷ್ಣ ರೈ ಮನವಳಿಕೆಗುತ್ತು, ಜಯಪ್ರಕಾಶ್ ರೈ ಪಟ್ಟೆಗುತ್ತು,ಚಂದ್ರಶೇಖರ ರೈ ಅಗತ್ತಾಡಿ,ವಿಠಲ ರೈ ಮನವಳಿಕೆಗುತ್ತು, ತುಕರಾಮ ರೈ ಕುಂಡಾಜೆ,ತಾರಾನಾಥ ರೈ ನಗ್ರಿ, ಪ್ರತಾಪಚಂದ್ರ ರೈ ಕುದ್ಮಾರುಗುತ್ತು,ಜಗನ್ನಾಥ ರೈ ಬಲೆಂಪೋಡಿ, ವಿಶ್ವನಾಥ ರೈ ಇರಿಂಟಾಡಿ, ಗೋಪಾಲಕೃಷ್ಣ ರೈ ಮನವಳಿಕೆಗುತ್ತು, ವಿಠಲ ರೈ ಗುತ್ತುಪಾಲು,ದಿವಾಕರ ರೈ ಪಟ್ಟೆಗುತ್ತು,ಜಗನ್ನಾಥ ಶೆಟ್ಟಿ ಕಾರೆಗುಡ್ಡೆ,ಬಾಲಕೃಷ್ಣ ಶೆಟ್ಟಿ ಶೇಡಿ ಕೇವಳಪಟ್ಟೆ,ಆಗತ್ತಾಡಿ ಸೀತಾರಾಮ ಶೆಟ್ಟಿ, ಶಶಿಧರ ರೈ ಮನವಳಿಕೆಗುತ್ತು, ಬಾಲಾಜಿ ಶೆಟ್ಟಿ ಕುಂಡಾಜೆ, ಬಾಲಕೃಷ್ಣ ರೈ ಮನವಳಿಕೆಗುತ್ತು ಮಂಗಳೂರು, ವಿಠಲ ರೈ ಪೂಂಜಾ,ಶೇಖರ ಶೆಟ್ಟಿ ಸುರುಳಿ, ರಘುನಾಥ ಚೌಟ, ಪುರಂದರ ರೈ ಮಿತ್ರಂಪಾಡಿ,ಸಂತೋಷ ಶೆಟ್ಟಿ ಸಾಜ,ಪಿ.ಡಿ ಕೃಷ್ಣಕುಮಾರ್ ರೈ ದೇವಸ್ಯ ಪುಣ್ಚಪ್ಪಾಡಿ,ಭಾಗ್ಯೇಶ್ ರೈ,ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ,ವಿಶ್ವನಾಥ ರೈ,ಕೊಣಾಲುಗುತ್ತು ವಿಠಲ ರೈ,ಸುಬ್ಬಣ್ಣ ರೈ ಖಂಡಿಗ,ನಾರಾಯಣ ರೈ ಬಾರಿಕೆ ಪರ್ಪುಂಜ,ಚಂದ್ರಹಾಸ ರೈ ಶಿಬರಾಜೆ,ಪ್ರಸಾದ್ ರೈ ಸೊರಕೆ,ರಾಕೇಶ್ ರೈ ಕಡೆಂಜಿ,ಆರುಣ್ ಆಳ್ವ ಬೋಳೋಡಿ, ಮೋಹನ ರೈ ನರಿಮೊಗರು,ರಾಜೇಶ್ ಶೆಟ್ಟಿ ಸಂಪ್ಯಾಡಿ,ಶಶೀಂದ್ರ ರೈ ಪಟ್ಟೆಗುತ್ತು, ದಿನೇಶ್ ಶೆಟ್ಟಿ ಬಾಲಾಜೆ,ವಿಶ್ವನಾಥ ಶೆಟ್ಟಿ ನೆಲ್ಯಾಡಿ, ರಮಾನಾಥ ರೈ ಶಿಬರಾಜೆ,ಜಯಪ್ರಕಾಶ್ ರೈ ಮನವಳಿಕೆಗುತ್ತು, ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಸುಭಾಸ್ ಕುಮಾರ್ ಶೆಟ್ಟಿ ಆರುವಾರ,ಪ್ರಭಾಕರ ರೈ ಕೆ.ಜಿ,ರಮೇಶ ರೈ ಮೈಸೂರು, ರವಿ ರೈ ಮಡಿಕೇರಿ, ಸ್ವಸ್ತಿಕ್ ಭಂಡಾರಿ ಮನವಳಿಕೆಗುತ್ತು, ದೀಪಕ್ ಶೆಟ್ಟಿ ಮನವಳಿಕೆಗುತ್ತು, ಇಂದುಶೇಖರ. ಶೆಟ್ಟಿ ಕುಕ್ಕೇರಿ,ಉಮೇಶ ರೈ ಬಳೆಂಪೋಡಿ,ಜನಾರ್ಧನ ಶೆಟ್ಟಿ ಸುರುಳಿ, ಪ್ರಜ್ವಲ್ ರೈ ತೋಟ್ಲ,ವಿಠಲ ರೈ ಹೊಸಮಾರಡ್ಡ,ಪದ್ಮನಾಭ ರೈ ಹಡೀಲು,ನಾರಾಯಣ ರೈ ಬಲೆಂಪೋಡಿ ಮನವಳಿಕೆಗುತ್ತು, ವಿನೋದ್ ಕುಮಾರ್ ರೈ ಬಳೆಂಪೋಡಿ ಮನವಳಿಕೆಗುತ್ತು, ಗೀತಾಮೋಹನ ರೈ ,ಕುಸುಮ ಪಿ ಶೆಟ್ಟಿ, ವತ್ಸಲಾ ಪಿ ಶೆಟ್ಟಿ, ಪುಲಸ್ತ್ಯ ರೈ,ಹರಿಣಾಕ್ಷಿ ಜೆ ಶೆಟ್ಟಿ, ಕೃಷ್ಷವೇಣಿ ಕರುಣಾಕರ ರೈ,ಅನಿತಾ ಹೇಮನಾಥ ಶೆಟ್ಟಿ, ಸ್ವರ್ಣಲತಾ ಜೆ.ರೈ,ವಾಣಿ ಸುಂದರ ಶೆಟ್ಟಿ, ಧನ್ಯಶ್ರೀ ಪ್ರಶಾಂತ ರೈ,ಸುನೀತಾ ಜಿ ರೈ,ಮಾಧವಿ ಬಿ ರೈ ಉಪ್ಪಿನಂಗಡಿ, ಅನುರಾದ ಶೆಟ್ಟಿ ಉಪ್ಪಿನಂಗಡಿ, ಸರೋಜಿನಿ ಕೆ ರೈ,ಆಶಾ ಎಸ್ ರೈ ಮರುವಂತಿಲ,ಗೀತಾಸುದೀರ್ ರೈ ಮರುವಂತಿಲ,ಸವಿತಾಗಂಗಾಧರ ರೈ ತೋಟ್ಲ,ತುಳಸಿ ಎಲ್ ಶೆಟ್ಟಿ, ಉಷಾ ರವೀಂದ್ರ ರೈ,ರಾಧಾಕೃಷ್ಣ ರೈ ಪರಾರಿಗುತ್ತು, ಬಾಲಚಂದ್ರ ಶೆಟ್ಟಿ ನೀರಾಜೆ,ಸುಭಾಶ್ಚಂದ್ರ ರೈ ಮನವಳಿಕೆಗುತ್ತು, ಮನೋಹರ ರೈ ಮನವಳಿಕೆಗುತ್ತು, ನವೀನ್ ರೈ,ದಯಾಕರ ರೈ ನೆಲ್ಯಾಡಿ, ಸೋಮಸುಂದರ ಶೆಟ್ಟಿ ಕಿನ್ನಿಗೋಳಿ,ಗುರುಕಿರಣ್ ಶೆಟ್ಟಿ ಬಾಲಾಜೆ,ಜಯರಾಜ್ ರೈ ಮನವಳಿಕೆಗುತ್ತು, ಲತನ್ ರೈ ವಕೀಲರು,ಜಯಪ್ರಕಾಶ್ ರೈ ಜಿ.ಪಿ,ಸುಧಾಕರ ರೈ ಪರಾರಿಗುತ್ತು, ಶ್ರೀಧರ ಶೆಟ್ಟಿ ಮನವಳಿಕೆಗುತ್ತು, ಮೋಹನದಾಸ ರೈ ವಳೆಂಜ,ಜಯಪ್ರಕಾಶ್ ಶೆಟ್ಟಿ ರಾಮಕುಂಜ, ಗಣೇಶ್ ರೈ ಬೇಳ್ಪಾಡಿ,ಲೋಲಾಕ್ಷ ಶೆಟ್ಟಿ ಸುರುಳಿ, ಸಂಜೀವ ಶೆಟ್ಟಿ ಪರಾರಿ,ರಾಧಾಕೃಷ್ಣ ರೈ ಬೆಳ್ಪಾಡಿ ಚಿತ್ತರಂಜನ್ ಶೆಟ್ಟಿ ಬರೆಂಬಾಡಿ,ಸದಾಶಿವ ಶೆಟ್ಟಿ ಮಾರಂಗ,ಸುಧಾಕರ ರೈ ಬಾಕಿಜಾಲು ಮನವಳಿಕೆಗುತ್ತು, ಪ್ರಕಾಶ್ ರೈ ಬಲೆಂಪೋಡಿ, ಉದಯಕುಮಾರ್ ರೈ ಕೊಯಿಲ ಪಟ್ಟೆ,ಉಮೇಶ ಶೆಟ್ಟಿ ಪಂಚಾಕ್ಷರಿ ಆಲಂಕಾರು, ದಿವಾಕರ ರೈ ಬಟ್ಲಡ್ಕ,ಜನಾರ್ಧನ್ ರೈ ಸುರುಳಿ, ಕವನ್ ರೈ ಮನವಳಿಕೆಗುತ್ತು, ಯತೀಶ್ ರೈ ಸೇರಿದಂತೆ ಹಲವು ಮಂದಿ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆಸರ್ ದ ಗೊಬ್ಬಲು ನಿಧಿ ಶೋಧನೆ ಎಲ್ಲರಿಗೂ,ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ,ಪ್ರೌಡ ಶಾಲಾ ಬಾಲಕ, ಬಾಲಕಿಯರಿಗೆ, ಪುರುಷರಿಗೆ,ಮಹಿಳೆಯರಿಗೆ,45 ವರ್ಷ ಮೇಲ್ಪಟ್ಟ ಪುರುಷರಿಗೆ,ಮಹಿಳೆಯರಿಗೆ
ಬೆಳಿಗ್ಗಿನಿಂದ ಸಂಜೆ ತನಕ‌ ಕೆಸರ್ ದ ಗೊಬ್ಬಲು ನಡೆಯಿತು ಕ್ರೀಡಾಕೂಟದ ತೀರ್ಪುಗಾರರಾಗಿ ದಯಾನಂದ ರೈ ಕೋರ್ಮಂಡ,ಪ್ರಫುಲ್ಲಾ ರೈ ಎನ್.ಕೇಳ್ಕ,ಶ್ರೇಯಸ್ ರೈ ಎಡಮಂಗಲ,ಯತೀಶ್ ರೈ ಕಲ್ಕಾಡಿ ಸೇರಿದಂತೆ ಅವರ ತಂಡ ಭಾಗವಹಿಸಿದ್ದರು.ವೀಕ್ಷಕ ವಿವರಣೆಯನ್ನು ಸತ್ಯನಾರಾಯಣ ರೈ ನಿಡ್ಪಳ್ಳಿ ಯವರು ಬಹಳ ಅಚ್ಚುಕಟ್ಟಾಗಿ ನೇರವೆರಿಸಿದರು.ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದ ಸಮಗ್ರ ಪ್ರಶಸ್ತಿಯನ್ನು ಆಲಂಕಾರು ವಲಯ,ದ್ವಿತೀಯ ಪ್ರಶಸ್ತಿಯನ್ನು ಕೆದುಂಬಾಡಿ ವಲಯ ಪಡೆಯಿತು.



ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದ ಆಯೋಜನ ಸಮಿತಿಯ. ಗೌರವಾಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆಗುತ್ತು, ಸಂಚಾಲಕರಾದ ಮೋಹನದಾಸ ರೈ ಪರಾರಿಗುತ್ತು, ಸಹಸಂಚಾಲಕರಾದ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಕೆ.ಗಣೇಶ ರೈ ಮನವಳಿಕೆಗುತ್ತು, ಮೋಹನದಾಸ ಶೆಟ್ಟಿ ಬಡಿಲ,ಪ್ರಭಾಕರ ಶೆಟ್ಟಿ ಕೇವಳ ಪಟ್ಟೆ,ಪ್ರಶಾಂತ ರೈ .ಜಿ,ಮನವಳಿಕೆಗುತ್ತು, ಮಮತಾ ಶೆಟ್ಟಿ ಅಂಬರಾಜೆ.ಗೌರವ ಸಲಹೆಗಾರರಾದ ರಾಧಾಕೃಷ್ಣ ರೈ ಪರಾರಿಗುತ್ತು ಸುಧಾಕರ ರೈ ಮನವಳಿಕೆಗುತ್ತು, ಅನಿಲ್ ರೈ ನೆಲ್ಯಾಡಿ, ಪ್ರವೀಣ್ ಭಂಡಾರಿ ಪುರ ಹಲವು ಕಾರ್ಯಕ್ರಮದಲ್ಲಿ ಸಹಕರಿಸಿದರು.ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಲೋಕನಾಥ ರೈ ಕೇಲ್ಕ ಕಾರ್ಯಕ್ರಮ ನಿರೂಪಿಸಿ, ಆಯೋಜನಾ ಸಮಿತಿಯ ಗೌರವಸಲಹೆಗಾರರಾದ ಹೇಮಂತ್ ರೈ ಮನವಳಿಕೆಗುತ್ತು ಸ್ವಾಗತಿಸಿ, ರೂಪಾ.ಜೆ.ರೈ,ರೂಪೇಶ ಶೆಟ್ಟಿ, ಅಧಿತಿ ರೈ,ಶ್ರೇಯಾ ರೈ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿ, ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದ ಕಾರ್ಯದರ್ಶಿ ಅಜಿತ್ ರೈ ಮನವಳಿಕೆಗುತ್ತು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here