







ಕಾವು :ಮಾಡ್ನೂರು ಗ್ರಾಮದ ನನ್ಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.17ರಂದು ನಡೆಯಿತು.


ಕಾರ್ಯಕ್ರಮವನ್ನು ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶಿಲ್ಪಶ್ರೀ ಮೀನೊಜಿಕಲ್ಲು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಅಂಗನವಾಡಿ ಮೇಲ್ವಿಚಾರಕಿ ಸುಲೋಚನಾ ಪೌಷ್ಟಿಕ ಆಹಾರದ ಮತ್ತು ಇಲಾಖಾ ಮಾಹಿತಿಯನ್ನು ನೀಡಿದರು.




ಆರೋಗ್ಯ ಕಾರ್ಯಕರ್ತೆಯಾದ ದಮಯಂತಿ ಉತ್ತಮ ಆರೋಗ್ಯ, ಪೌಷ್ಟಿಕಾಂಶ ಆಹಾರ,ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ಅಶ್ವಿನಿ ಗರ್ಭ ಕ್ಯಾನ್ಸರ್ ನ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನನ್ಯ ಶಾಲಾ ಮುಖ್ಯಗುರು ರಾಜೇಶ್, ಆಶಾ ಕಾರ್ಯಕರ್ತೆ ಉಷಾ ಉಪಸ್ಥಿತರಿದ್ದರು. ಬಾಲ ವಿಕಾಸ ಸಮಿತಿಯ ಸದಸ್ಯರು ಮತ್ತು ಪೋಷಕರಾದ ಪ್ರತಿಮಾ, ಆಶಾ ನಿಧಿಮುಂಡ, ರಮ್ಯ, ಪದ್ಮಾವತಿ, ಬೇಬಿ ಬಜಕುಡೇಳು, ಕವಿತಾ ಪರನೀರು, ತುಳಸಿ ನನ್ಯ, ನಿವೇದಿತಾ ಪಟ್ಟುಮೂಲೆ, ಲಲಿತಾ ಮದ್ಲ, ಶಾರದಾ, ಶಿಲ್ಪಶ್ರೀ ಮೀನೋಜಿಕಲ್, ವೇದಾವತಿ ಮದ್ಲ ಇವರುಗಳು ಪೌಷ್ಟಿಕ ಆಹಾರ ತಯಾರಿಸಿ ತಂದಿದ್ದು, ಇವರಿಗೆ ತುಡರ್ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಸುಬ್ರಾಯ ಬಲ್ಯಾಯ ಮದ್ಲ ಬಹುಮಾನ ನೀಡಿದರು.ನನ್ಯ ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಹಾಯಕಿ ಶಾರದಾ ಸಹಕರಿಸಿದರು










