







ನಿಡ್ಪಳ್ಳಿ; ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಚೂರಿಪದವು ಇಲ್ಲಿನ ವಿದ್ಯಾರ್ಥಿಗಳಿಗೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ವತಿಯಿಂದ ಉಚಿತ ಬ್ಯಾಗ್ ವಿತರಣಾ ಕಾರ್ಯಕ್ರಮ ಸೆ.19 ರಂದು ನಡೆಯಿತು.


ಟ್ರಸ್ಟ್ ನ ನಿರ್ದೇಶಕರಾದ ರಾಜಗೋಪಾಲರವರು ಮಕ್ಕಳಿಗೆ ಬ್ಯಾಗ್ ವಿತರಸಿದರು.ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಭಾರತಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಗುರು ಲಕ್ಷ್ಮೀ ಸ್ವಾಗತಿಸಿದರು.ಶಿಕ್ಷಕಿ ಐರಿನಾ ಕ್ರಾಸ್ತಾ ವಂದಿಸಿದರು.ಶಿಕ್ಷಕಿ ಕುಮುದರವರು ಕಾರ್ಯಕ್ರಮ ನಿರೂಪಿಸಿದರು.ಸಿಬ್ಬಂದಿಗಳಾದ ಬಿಪಿನ್ ಚಂದ್ರ ಹಾಗೂ ಜೀವಿತಾರವರು ಸಹಕರಿಸಿದರು.ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಪಾಲ್ಗೊಂಡರು.













