







ನಿಡ್ಪಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮೂಡ್ನೂರು ಇದರ ಜಂಟಿ ಆಶ್ರಯದಲ್ಲಿ ಸೆ.21 ರಂದು ಜರಗಿದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ 14 ರ ವಯೋಮಾನದ ಕ್ರೀಡಾಕೂಟದಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಬಾಲಕರ ವಿಭಾಗ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.


ಶರಣ್ 100 ಮೀಟರ್ ಓಟದಲ್ಲಿ ದ್ವಿತೀಯ ಶಾಟ್ ಪುಟ್ ತೃತೀಯ, ದೀಕ್ಷಿತ್ ಚಕ್ರ ಎಸೆತ ದ್ವಿತೀಯ, ಜನಿತ್ 600 ಮೀಟರ್ ತೃತೀಯ, ಪ್ರೀತೇಶ್,ಷಣ್ಮುಖ, ಶರಣ್ ಜನಿತ್ 4×100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಗುರು ವಿಜಯಕುಮಾರ್ ಎಂ ತಿಳಿಸಿರುತ್ತಾರೆ.ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ತರಬೇತಿ ನೀಡಿರುತ್ತಾರೆ.













