ಸೆ. 26 ರಿಂದ ಪುತ್ತೂರಿನಲ್ಲಿ ‘ವೈಭವಂ ಫ್ಯಾಷನ್ ಮೇಳ’ : ಗ್ರಾಹಕರಿಗೆ ವಿಶೇಷ ಬಹುಮಾನ ಗೆಲ್ಲುವ ಅವಕಾಶ

0

ಪುತ್ತೂರು: ದೀಪಂ – ದಿ ಆರ್ಟ್ ಆಫ್ ಡ್ರೇಪ್ ಅಂಡ್ ಅಡಾರ್ನ್‌ಮೆಂಟ್ ವತಿಯಿಂದ ವೈಭವಂ ಫ್ಯಾಷನ್ ಮೇಳ ಸೆ. 26, 27 ಮತ್ತು 28ರಂದು ಪುತ್ತೂರಿನ ಟೌನ್ ಬ್ಯಾಂಕ್ ಹಾಲ್‌ನಲ್ಲಿ ನಡೆಯಲಿದೆ.

ಮೇಳದಲ್ಲಿ ಬ್ಯಾಗ್ಸ್, ಸೀರೆಗಳು, ಆಯುರ್ವೇದಿಕ್ ಉತ್ಪನ್ನಗಳು, ಕಿಡ್ಸ್ ವೇರ್, ಮೆನ್ಸ್ ವೇರ್, 1 ಗ್ರಾಂ ಗೋಲ್ಡ್ ಜ್ಯುವೆಲ್ಲರಿ, ಜ್ಯುವೆಲ್ಲರಿ ಆಕ್ಸೆಸರೀಸ್, ಪಂಚಲೋಹದ ಆರ್ನಮೆಂಟ್ಸ್ ಸೇರಿದಂತೆ ವಿವಿಧ ಸ್ಟಾಲ್‌ಗಳು ಇರಲಿವೆ. ಕಿಡ್ಸ್ ವೇರ್ ಮತ್ತು ಮೆನ್ಸ್ ವೇರ್ ಮೇಲೆ ಶೇ.40 ರವರೆಗೆ ರಿಯಾಯಿತಿ ಇರಲಿದೆ.

ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ರೂ.2000, ರೂ.1000, ರೂ.500 ಬಹುಮಾನ ಗೆಲ್ಲುವ ಅವಕಾಶವಿದೆ. ಜೊತೆಗೆ ಭೀಮಾ ಗೋಲ್ಡ್ ವತಿಯಿಂದಲೂ ವಿಶೇಷ ಬಹುಮಾನ ಗೆಲ್ಲುವ ಅವಕಾಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here