ವಿಟ್ಲ : ಬೆಂಕಿ ಅವಘಡಕ್ಕೊಳಗಾದ ಶ್ರೀ ಎಲೆಕ್ಟ್ರಿಕಲ್ ಅಂಗಡಿಗೆ 5 ಲಕ್ಷ ಪರಿಹಾರ

0

ಪುತ್ತೂರು: ಅಕಸ್ಮಿಕವಾಗಿ ಬೆಂಕಿ ತಗುಲಿ ವಿಟ್ಲ ಮಂಗಳೂರು ರಸ್ತೆಯಲ್ಲಿದ್ದ ಶ್ರೀ ಎಲೆಕ್ಟ್ರಿಕಲ್ ಅಂಗಡಿ ಭಸ್ಮವಾಗಿದ್ದು, ಅಂಗಡಿ ಮಾಲಿಕ ಸಂತೋಷ್‌ಕುಮಾರ್‌ರವರಿಗೆ ಸರಕಾರದಿಂದ 5 ಲಕ್ಷ.ರೂ ಪರಿಹಾರ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


2025 ಡಿಸೆಂಬರ್ 31 ರ ರಾತ್ರಿ ವೇಳೆ ಆಕಸ್ಮಿಕ ಬೆಂಕಿಯಿಂದ ಅಂಗಡಿ ಭಸ್ಮವಾಗಿದ್ದು ಮಾತ್ರವಲ್ಲದೆ ಅಂಗಡಿಯಲ್ಲಿದ್ದ ವಿದ್ಯುತ್ ಉಪಕರಣಗಳು ನಾಶವಾಗಿ ಸುಮಾರು 80 ಲಕ್ಷ ರೂ ನಷ್ಟ ಉಂಟಾಗಿತ್ತು. ಘಟನೆಯ ವಿಷಯ ತಿಳಿದು ಶಾಸಕ ಅಶೋಕ್ ರೈ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ಅಂಗಡಿ ಮಾಲಕರಿಗೆ ಸಾಂತ್ವನ ತಿಳಿಸಿದ್ದರು.


ಸದ್ರಿ ಘಟನೆಯ ಬಗ್ಗೆ ಶಾಸಕರು ಮುಖ್ಯಮಂತ್ರಿಗಳಿಗೆ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರು. ಶಾಸಕರ ಮನವಿಯನ್ನು ಪರಿಗಣಿಸಿದ ಸರಕಾರ ನಷ್ಟಕ್ಕೊಳಗಾದ ಅಂಗಡಿ ಮಾಲಿಕರಿಗೆ 5 ಲಕ್ಷರೂ ಪರಿಹಾರ ಮಂಜೂರಗೊಳಿಸಿದೆ. ಪರಿಹಾರ ಮೊತ್ತವನ್ನು ಸಂತೋಷ್‌ಕುಮಾರ್‌ರವರ ಖಾತೆಗೆ ಜಮೆ ಮಾಡಲಾಗಿದೆ.

LEAVE A REPLY

Please enter your comment!
Please enter your name here