







ಪುತ್ತೂರು:ಪುತ್ತೂರು ನೆಲ್ಲಿಕಟ್ಟೆಯಲ್ಲಿ ಪಾರ್ಕ್ ಮಾಡಿದ ಪೊಲೀಸ್ ಸಿಬಂದಿಯೋರ್ವರ ಬೈಕ್ ಕಳವು ಮಾಡಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದ.ಕ.ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ಸಶಸ ಮೀಸಲು ಪೊಲೀಸ್ ದಳದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿಲಾಶ್ ಎಲ್.ಎಸ್ ಅವರ ಹೋಂಡಾ ಶೈನ್ ಬೈಕ್(ಕೆ.ಎ 44-ಯು:8425) ಕಳವಾಗಿದೆ.ಅವರು ಪ್ರಹಾರ ದಳ ಕರ್ತವ್ಯ ನಿರ್ವಹಿಸಲು ಪುತ್ತೂರು ಉಪವಿಭಾಗಕ್ಕೆ ವರದಿ ಮಾಡಿಕೊಂಡು ಕರ್ತವ್ಯದಲ್ಲಿದ್ದು, ನೆಲ್ಲಿಕಟ್ಟೆಯಲ್ಲಿ ವಿಶ್ರಾಂತಿಗಾಗಿ ನೀಡಿದ ಬಾಡಿಗೆ ಮನೆಯಲ್ಲಿದ್ದರು.ಸೆ.18ರಂದು ಅವರು ಕರ್ತವ್ಯ ಮುಗಿಸಿ ವಿಶ್ರಾಂತಿ ಪಡೆಯಲು ನೆಲ್ಲಿಕಟ್ಟೆ ಮನೆಗೆ ಬೈಕ್‌ನಲ್ಲಿ ಬಂದು ಮನೆಯ ಹೊರಗೆ ಬೈಕ್ ಪಾರ್ಕ್ ಮಾಡಿದ್ದರು.ಸ್ವಲ್ಪ ಹೊತ್ತಿನ ಬಳಿಕ ಬಂದು ನೋಡಿದಾಗ ಬೈಕ್ ಅನ್ನು ಯಾರೋ ಕಳ್ಳರು ಕಳವುಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ.













