ಪುತ್ತೂರು ಸುದ್ದಿ ಬಿಡುಗಡೆಯಿಂದ ದೀಪಾವಳಿ ಸಂಚಿಕೆ -2026 : ವಿಶೇಷ ಬರಹ ಅಂಕಣ ಆಹ್ವಾನ – ಕಳುಹಿಸಿ ಕೊಡಲು ಸೆ. 30 ಅಂತಿಮ ದಿನ

0

ಪುತ್ತೂರು: ಪುತ್ತೂರು ಮತ್ತು ಹೊರನಾಡಿನಲ್ಲಿ ಜನಪ್ರಿಯತೆ ಗಳಿಸಿರುವ ಪುತ್ತೂರು ಸುದ್ದಿ ಬಿಡುಗಡೆ ದಿನಪತ್ರಿಕೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ದೀಪಾವಳಿ ಸಂಚಿಕೆ 2026 ಪ್ರಕಟಗೊಳ್ಳಲಿದೆ.

ಗ್ರಾಹಕ ಓದುಗರಿಗೆ ಜ್ಞಾನದ ದೀವಿಗೆ ಎಂಬ ಧ್ಯೇಯದೊಂದಿಗೆ “ಹಣತೆಯ ಬೆಳಕು, ಸಾಹಿತ್ಯದ ಹೊಳಪು” ಶೀರ್ಷಿಕೆಯಡಿ ಈ ಸಂಚಿಕೆ ವರ್ಣರಂಜಿತ ಮತ್ತು ಸಂಗ್ರಹಯೋಗ್ಯವಾಗಿ ಮೂಡಿ ಬರಲಿದೆ.

ಈ ಸಂಚಿಕೆಗಾಗಿ ಓದುಗರಿಂದ ವಿವಿಧ ವಿಷಯಗಳ ಬರಹ, ಕಥೆ, ಕವನ, ಅನುಭವ, ಫೋಟೋಗಳನ್ನು ಆಹ್ವಾನಿಸಲಾಗಿದೆ. ಕಥೆ, ದೊಡ್ಡಕಥೆ, ಮಿನಿಕಥೆ, ಭಾಷೆ ತಿಳಿಯದೆ ಆದ ಅವಾಂತರ, ಬದುಕು ಕೊಟ್ಟ ಹಳಿಮದ್ದು, ವಿಶೇಷ ಹಬ್ಬದ ಆಚರಣೆ, ವಿದೇಶದಲ್ಲಿ ದೀಪಾವಳಿ ಆಚರಣೆ, ನಾನು ಪಂಚಾಯತ್ ಸದಸ್ಯನಾದರೆ, ಮರೆವಿನ ಪ್ರಸಂಗ, ಅಮ್ಮನಿಗೆ ಮಗ/ಮಗಳ ಪತ್ರ, ಪ್ರಾಚ್ಯ ವಸ್ತು ಸಂಗ್ರಹ, ಮೊಬೈಲ್ ನೆಟ್‌ವರ್ಕ್ ಇಲ್ಲದ ಪರದಾಟ, ಸುಳ್ಳು ಹೇಳಿ ಸಿಕ್ಕಿಬಿದ್ದಾಗ, ಸಾಲಕೊಟ್ಟು ರೋಸಿ ಹೋದ ಕಥೆ, ಸಾಕುಪ್ರಾಣಿಯ ನೆನಪು ಸೇರಿದಂತೆ 20ಕ್ಕೂ ಹೆಚ್ಚು ವಿಭಿನ್ನ ಅಂಕಣಗಳಿಗೆ ಬರಹಗಳನ್ನು ಕಳುಹಿಸಬಹುದು. ಸೆ.30 ಕಳುಹಿಸಿಕೊಡಲು ಅಂತಿಮ ದಿನವಾಗಿದೆ.

ಕಳುಹಿಸಬೇಕಾದ ವಿಷಯಗಳು:

1. ಕಥೆ, ದೊಡ್ಡಕಥೆ, ಲೇಖನಗಳು: ಉತ್ತಮ ಕಥಾ ಹಂದರವಿರುವ ಕಥೆಗಳು ಹಾಗೂ ಉತ್ತಮ ವಿಷಯಾಧಾರಿತ ಲೇಖನಗಳನ್ನು ಕಳುಹಿಸಬಹುದು. ಮಿನಿ ಕಥೆಗಳು ಒಂದು ಹಾಳೆ (A4) ಎರಡರಂತೆ ಹಾಗೂ ದೊಡ್ಡ ಕಥೆಗಳಿಗೆ 2 ಹಾಳೆ (A4) ಗಳನ್ನು ಮೀರದಂತೆ ಕಳುಹಿಸಿ.

2. ಭಾಷೆ ತಿಳಿಯದೇ ಆದ ಅವಾಂತರ: ನಾವು ಯಾವುದೋ ಕೆಲಸ / ಉದ್ಯೋಗಕ್ಕಾಗಿ ಇತರ ಊರು / ದೇಶಗಳಿಗೆ ಹೋದಾಗ ಅಲ್ಲಿನ ಭಾಷೆಯಿಂದ ಸಮಸ್ಯೆ, ಅವಾಂತರ ಆಗಿರುತ್ತದೆ. ಇದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

3. ಬದುಕು ಕೊಟ್ಟ ಹಳ್ಳಿಮದ್ದು: ಹಳ್ಳಿಮದ್ದು ಎಂಬುದು ನಮ್ಮ ಹಿರಿಯರ ಕಾಲದಿಂದ ಬಂದ ಪದ್ಧತಿ. ಎಷ್ಟೋ ಖಾಯಿಲೆಗಳು ಹಳ್ಳಿಮದ್ದಿನಿಂದ ವಾಸಿಯಾಗಿರುತ್ತದೆ. ಖಾಯಿಲೆ ಗುಣಪಡಿಸಿದ ಹಳ್ಳಿಮದ್ದಿನ ವಿವರಗಳನ್ನು ನಮಗೆ ಕಳುಹಿಸಿ. ಇದು ಇತರರಿಗೂ ಬದುಕು ನೀಡುತ್ತದೆ.

4. ವಿಶೇಷ ಹಬ್ಬ ಆಚರಣೆ: ಪ್ರತಿಯೊಂದು ಮನೆ / ಊರು / ಪ್ರದೇಶದಲ್ಲಿ ವೈವಿಧ್ಯಮಯ ಹಬ್ಬಗಳ ಆಚರಣೆ ಇರುತ್ತದೆ. ಈ ರೀತಿಯ ವಿಶೇಷ, ಅಪರೂಪದ ಹಬ್ಬಗಳ ಆಚರಣೆ ವಿವರ ಹಾಗೂ ಫೋಟೋಗಳನ್ನು ಕಳುಹಿಸಿ.

5. ವಿದೇಶದಲ್ಲಿ ದೀಪಾವಳಿ ಆಚರಣೆ: ದೇಶ ಅಲ್ಲದೆ ವಿದೇಶದಲ್ಲಿಯೂ ನಮ್ಮ ದೀಪಾವಳಿ ಹಬ್ಬ ಆಚರಿಸುತ್ತಾರೆ. ವಿದೇಶದಲ್ಲಿ ನೆಲೆಸಿರುವ ನಮ್ಮೂರಿನವರು ಆಚರಿಸಿದ ದೀಪಾವಳಿ ಆಚರಣೆಯ ಫೋಟೋ, ಸ್ವಲ್ಪ ವಿವರ ಕಳುಹಿಸಿ.

6. ನಾನು ಪಂಚಾಯತ್ ಸದಸ್ಯನಾದರೆ: ಕೆಲವರಿಗೆ ಪಂಚಾಯತ್ ಮೆಂಬರ್ ಆಗಿ ಊರು ಅಭಿವೃದ್ಧಿ ಮಾಡಬೇಕೆಂಬ ಕನಸು, ಆಸೆ ಇರುತ್ತದೆ. ಆದರೆ ನಾನಾ ಕಾರಣಗಳಿಂದ ಅದು ಸಾಧ್ಯವಾಗುವುದಿಲ್ಲ. ನೀವು ಪಂಚಾಯತ್ ಸದಸ್ಯನಾದರೆ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡುತ್ತೀರಿ, ಇದನ್ನು ನಮಗೆ ಕಳುಹಿಸಿ.

7. ಮರೆವಿನ ಪ್ರಸಂಗ: ಮರೆವು ಕೆಲವೊಮ್ಮೆ ನಮ್ಮನ್ನು ವೇದಿಕೆಗೆ ಸಿಲುಕಿಸುತ್ತದೆ. ಅಲ್ಲದೆ ಕೆಲವು ಸಂದರ್ಭದಲ್ಲಿ ಓದಿತು ಕುಣಿಕೆ ಆಗಿರುತ್ತದೆ. ಇಂತಹ ಮರೆವಿನ ಕುರಿತು ಹಾಗೂ ಕೊನೆಗೆ ಘಟನೆಗಳನ್ನು ನಮಗೆ ಕಳುಹಿಸಿ.

8. ಅಮ್ಮನಿಗೆ ಮಗ / ಮಗಳ ಪತ್ರ: ಅಮ್ಮ ಎಂದರೆ ಪ್ರೀತಿ, ನಿಸ್ವಾರ್ಥ, ಕಾಳಜಿ ಮತ್ತು ಧೈರ್ಯದ ಜೀವಂತ ರೂಪ. ಅಮ್ಮನಿಗೆ ಮಗ ಅಥವಾ ಮಗಳು ಬರೆದ ಪತ್ರ ಹೇಗಿರುತ್ತದೆ ಎಂಬುದನ್ನು ತಿಳಿಸಲು ನೀವು ಬರೆದ ಪತ್ರವನ್ನು ನಮಗೆ ಕಳುಹಿಸಿ.

9. ಪ್ರಾಚ್ಯ ವಸ್ತುಗಳ ಸಂಗ್ರಹ: ಪ್ರಾಚ್ಯ ವಸ್ತುಗಳು ಇತಿಹಾಸ ತಿಳಿಸುತ್ತದೆ. ಮನೆಯಲ್ಲಿ ಪ್ರಾಚ್ಯ ವಸ್ತುಗಳ ಸಂಗ್ರಹ ಇದ್ದರೆ ಅವುಗಳ ಫೋಟೋ ವಿವರ ಕಳುಹಿಸಿ.

10. ಮೊಬೈಲ್ ನೆಟ್‌ವರ್ಕ್ ಇಲ್ಲದ ಪರದಾಟ: ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲದೆ ಬದುಕುವುದು ಕಷ್ಟವಾಗಿದೆ. ದಿನನಿತ್ಯದಲ್ಲಿ ಮೊಬೈಲ್ ಗೆ ನೆಟ್‌ವರ್ಕ್ ಇಲ್ಲದಿದ್ದರೆ ಪರದಾಟ ಪಡಬೇಕಾಗುತ್ತದೆ. ಹೀಗೆ ಪರದಾಟದ ಅನುಭವ ನಮಗೆ ಕಳುಹಿಸಿ.

11. ಸುಳ್ಳು ಹೇಳಿ ಸಿಕ್ಕಿಬಿದ್ದಾಗ: ಜೀವನದಲ್ಲಿ ಅನೇಕ ಬಾರಿ ಸುಳ್ಳು ಹೇಳುತ್ತೇವೆ. ಸುಳ್ಳು ಹೇಳಿ ಸಿಕ್ಕಿ ಬಿದ್ದ ಕಷ್ಟದ ಅನುಭವ ನಮಗೆ ತಿಳಿಸಿ.

12. ಸಾಲ ಕೊಟ್ಟು ರೋಸಿ ಹೋದ ಕಥೆ: ಎಲ್ಲರಿಗೂ ಒಂದಲ್ಲ ಒಂದು ಬಾರಿ ಸಾಲ ಪಡೆದುಕೊಂಡು ಅಥವಾ ಸಾಲ ಕೊಟ್ಟ ಅನುಭವ ಆಗಿರುತ್ತದೆ. ಸಾಲ ಕೊಟ್ಟು ರೋಸಿ ಹೋದ ಕಥೆ ನಮಗೆ ಕಳುಹಿಸಿ.

13. ಸಾಕುಪ್ರಾಣಿಯ ನೆನಪು: ಎಲ್ಲರ ಮನೆ / ವಠಾರದಲ್ಲಿ ಸಾಕು ಪ್ರಾಣಿಗಳು ಇರುತ್ತದೆ. ಸಾಕು ಪ್ರಾಣಿಗಳೊಂದಿಗಿನ ಅವಿನಾಭಾವ ಸಂಬಂಧ ಇರುತ್ತದೆ. ಮರೆತುಹೋದ ಸಾಕುಪ್ರಾಣಿಯ ನೆನಪಿನ ಕುರಿತು ಬರೆದು ಕಳುಹಿಸಿಕೊಡಿ.

14. ಸಾಂಪ್ರದಾಯಿಕ ಉಡುಪಿನಲ್ಲಿ ಯುವಕರು: ಸಾಂಪ್ರದಾಯಿಕ ಉಡುಗೆ ತೊಟ್ಟು ಯುವಕರು ಹೆಸರು, ವಿಳಾಸದೊಂದಿಗೆ ಫೋಟೋ ಕಳುಹಿಸಿ.

15. ಯುವರಾಜ-ಯುವರಾಣಿ ದಂಪತಿ ಫೋಟೋ: ಸಾಂಪ್ರದಾಯಿಕ ಉಡುಗೆಯಲ್ಲಿ ದಂಪತಿಗಳ ಹೆಸರು ವಿಳಾಸದೊಂದಿಗೆ ಫೋಟೋ ಕಳುಹಿಸಿ. (ಮದುವೆಯಾಗಿ 3 ವರ್ಷದ ಒಳಗಿನವರು)

16. ಅಜ್ಜ / ಅಜ್ಜಿ ಜೊತೆ ಮೊಮ್ಮಕ್ಕಳು: ಅಜ್ಜ ಅಥವಾ ಅಜ್ಜಿಯೊಂದಿಗೆ ಮೊಮ್ಮಕ್ಕಳಿಗೆ ವಿಶೇಷ ಬಾಂಧವ್ಯ ಇರುತ್ತದೆ. ಬಾಂಧವ್ಯ ಸಾರುವ ಅಜ್ಜ ಅಥವಾ ಅಜ್ಜಿ ಜೊತೆ ಮೊಮ್ಮಕ್ಕಳು ಇರುವ ಫೋಟೋ ತೆಗೆದು ಕಳುಹಿಸಿ.

17. ಗುತ್ತಿನ ಮನೆಯಲ್ಲಿ ಗತ್ತಿನ ಕುಟುಂಬ: ಗುತ್ತಿನ ಮನೆಗೆ ವಿಶೇಷ ಸ್ಥಾನಮಾನ ಇದೆ. ಗುತ್ತಿನ ಮನೆಯಲ್ಲಿ ಕುಟುಂಬ ಸದಸ್ಯರು ಇರುವ ಫೋಟೋ ಕಳುಹಿಸಿ.

18. ಪ್ರೇಕ್ಷಣೀಯ ಸ್ಥಳದಲ್ಲಿ ಸೆಲ್ಫಿ: ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ತೆಗೆದ ಸೆಲ್ಫಿ ಫೋಟೋಗಳಿದ್ದರೆ ನಮಗೆ ಕಳುಹಿಸಿ.

19. ಹೊಸ ರುಚಿ: ಮನೆಯಲ್ಲಿ ಮಾಡಿದ ಯಾವುದಾದರೂ ವಿಶೇಷವಾಗಿರುವ ಹೊಸ ರುಚಿಯ ವಿವರ ಕಳುಹಿಸಿ ಕೊಡಿ.

20. ಚಿತ್ರ ಚಿತ್ತಾರ: ಮಕ್ಕಳಿಗಾಗಿ ಚಿತ್ರಕಲಾ ಆಯೋಜಿಸಿದ್ದು 1 ರಿಂದ 7ನೇ ತರಗತಿ ಮಕ್ಕಳು ಚಿತ್ರ ರಚಿಸಿ ಕಳುಹಿಸಿಕೊಡಬಹುದು. ಚಿತ್ರಗಳು ವರ್ಣ ರಂಜಿತವಾಗಿ A4 ಹಾಳೆಯಲ್ಲಿ ಲ್ಯಾಂಡ್ ಸ್ಕೇಪ್ ನಲ್ಲಿ ಇರಬೇಕು. ಹೆಸರು, ಶಾಲೆ, ವಿಳಾಸ ಅಗತ್ಯ. (ಕೃಷಿ ಸೊಬಗು)

21. ವಿದ್ಯಾರ್ಥಿಗಳ ಅಂಕಣ: ಪಿಯುಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಿಶೇಷ ಅಂಕಣವಿದ್ದು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಕವನ, ಕಥೆ ಕಳುಹಿಸಿಕೊಡಬಹುದು.

ನಿಬಂಧನೆಗಳು:
ಆರ್ಟು ಫೋಟೋ, ಬರಹ, ಚಿತ್ರಗಳನ್ನು ಮಾತ್ರ ಪ್ರಕಟಿಸಲಾಗುವುದು.ಬರಹಗಳನ್ನು ವಾಟ್ಸಪ್ ಅಥವಾ ಇ-ಮೇಲ್ ಮೂಲಕವೇ ಕಳುಹಿಸಬೇಕು. (ಟೈಪ್ ಮಾಡಿದ ಬರಹಗಳಿಗೆ ಅವಕಾಶ) ಫೋಟೋ, ಬರಹಗಳನ್ನು ಕಳುಹಿಸುವಾಗ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಕಳುಹಿಸಿಕೊಡಬೇಕು. ಸೆ.30 ಕಳುಹಿಸಿಕೊಡಲು ಅಂತಿಮ ದಿನವಾಗಿದೆ.

ಕಳುಹಿಸಬೇಕಾದ ವಿಳಾಸ:
ಸುದ್ದಿ ಬಿಡುಗಡೆ – ದೀಪಾವಳಿ ಸಂಚಿಕೆ ವಿಭಾಗ
ಹಳೆ ಬಜಾರ್ ಅಂಚೆ ಕಛೇರಿ ಬಳಿ ಪುತ್ತೂರು.
ಮೊ: 78296 68949
ಇ-ಮೇಲ್: [email protected] ಈ ವಿಳಾಸಕ್ಕೆ ಮೇಲಿನ ಸಂಬಂಧಿಸಿದ ಕುರಿತು ಕಳುಹಿಸಿಕೊಡಬಹುದು.

LEAVE A REPLY

Please enter your comment!
Please enter your name here