







ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೆ .22 ರಂದು ಘನ ತ್ಯಾಜ್ಯ ನಿರ್ವಹಣೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಈ ಕಾರ್ಯಕ್ರಮವನ್ನು ಪುತ್ತೂರು ನಗರಸಭೆಯ ಸಹಯೋಗದೊಂದಿಗೆ, ಎಚ್‌ಡಿಎಫ್‌ಸಿ (HDB) ಫೈನಾನ್ಶಿಯಲ್ ಸರ್ವಿಸಸ್‌ನ ಆರ್ಥಿಕ ನೆರವಿನಿಂದ ಹಾಗೂ ಮಾನ್ಯ ಪೌರಾಯುಕ್ತರ ಮಾರ್ಗದರ್ಶನದಲ್ಲಿ ‘ಸಾಹಸ’ (Sahas) ಸಂಸ್ಥೆ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.



ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು, ಇಂದಿನ ದಿನಗಳಲ್ಲಿ ತ್ಯಾಜ್ಯ ನಿರ್ವಹಣೆಯ ಅಗತ್ಯತೆಯನ್ನು ಪ್ರಸ್ತಾಪಿಸಿ, ಇಂತಹ ಉತ್ತಮ ಹಾಗೂ ಸಮಾಜಮುಖಿ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಿದ್ದಕ್ಕಾಗಿ ಆಯೋಜಕರಿಗೆ ಸ್ವಾಗತ ಕೋರಿ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆಯ ಸಮುದಾಯ ಪ್ರೇರೇಪಕರು, ವಾಹನ ಚಾಲಕರು, ಸಾಹಸ್ NGO ಸಂಸ್ಥೆಯ ಸಂಯೋಜಕರಾದ ಅನಂತ ದೇಶಭಂಡಾರಿ, ಮೇಲ್ವಿಚಾರಕರಾದ ಗಣೇಶ ಹಾಗೂ ಇರ್ಫಾನ್ ಉಪಸ್ಥಿತರಿದ್ದು, ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವ ವಿಧಾನಗಳು ಮತ್ತು ಪರಿಸರ ನೈರ್ಮಲ್ಯದ ಕುರಿತು ವಿದ್ಯಾರ್ಥಿನಿಯರಿಗೆ ಸೂಕ್ತ ಮಾಹಿತಿ ಹಾಗೂ ಜಾಗೃತಿ ಮೂಡಿಸಿದರು.










