







ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಣಿಯೂರು ಒಕ್ಕೂಟ,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಾಣಿಯೂರು ಘಟಕ ಸಮಿತಿಯ ಸದಸ್ಯರು ಇಲ್ಲಿನ ಕಾಣಿಯೂರು ರೈಲು ನಿಲ್ದಾಣವನ್ನು ಸ್ವಚ್ಛಗೊಳಿಸುವ ಮೂಲಕ ಪ್ರಯಾಣಿಕಸ್ನೇಹಿ ನಿಲ್ದಾಣವಾಗಿಸಿದರು.
ಇಲ್ಲಿಂದ ಹೆಚ್ಚಿನ ಪ್ರಯಾಣಿಕರು, ವಿದ್ಯಾರ್ಥಿಗಳು ಪ್ರತಿನಿತ್ಯ ಮಂಗಳೂರು, ಬಿಸಿ ರೋಡ್, ಪುತ್ತೂರಿಗೆ ಸಂಚರಿಸುತ್ತಿದ್ದು, ಯಾವುದೇ ಶ್ರಮವಿಲ್ಲದ ಪ್ರಯಾಣ,ಮಾತ್ರವಲ್ಲದೇ ಸಮಯ ಮತ್ತು ಹಣ ಉಳಿತಾಯವಾಗುತ್ತಿದೆ. ರಾಜ್ಯ ಹೆದ್ದಾರಿಗೆ ಅತ್ಯಂತ ಸನಿಹದಲ್ಲಿರುವ, ಏಕೈಕ ಕಾಣಿಯೂರು ರೈಲು ನಿಲ್ದಾಣ ಸ್ವಚ್ಛ ಸುಂದರವಾಗಿ ಪ್ರಯಾಣಿಕ ಸ್ನೇಹಿ ನಿಲ್ದಾಣವಾಗಿದೆ.












