ಕೃಷಿ ಯಂತ್ರೋಪಕರಣಗಳ ಮಾರಾಟದಲ್ಲಿ ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘ ಪ್ರಥಮ : ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘದಿಂದ ಗೌರವ ಪುರಸ್ಕಾರ

0

ಪುತ್ತೂರು: 2025-32ನೇ ಸಾಲಿನಲ್ಲಿ ಅತ್ಯಧಿಕ ಮೌಲ್ಯ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಿ, ಸದಸ್ಯರಿಗೆ ವಿತರಿಸಿರುವ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಂಗಳೂರು ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘದ ಅತ್ಯುತ್ತಮ ಸಹಕಾರ ಸಂಘ ಪ್ರಥಮ ಪುರಸ್ಕಾರ ನೀಡಿ ಗೌರವಿಸಿದೆ.


ಮಂಗಳೂರಿನ ಬಲ್ಮಠ ರಸ್ತೆಯ ಶಾಂತಿ ನಿಲಯದಲ್ಲಿ ಸೆ.೨೩ರಂದು ನಡೆದ ಸಂಘದ ಮಹಾಸಭೆಯಲ್ಲಿ ಪುರಸ್ಕಾರ ನೀಡಿ ಗೌರವಿಸಿದರು. ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ ಹಾಗೂ ನಿರ್ದೇಶಕ ಪ್ರವೀಣ್ ಕುಮಾರ್ ಕೆ. ಗೌರವ ಪುರಸ್ಕಾರವನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here