ಕೊಣಾಲು ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮೊದ್ದೀನ್ ಸಾಹೇಬ್ ಹೃದಯಾಘಾತದಿಂದ ನಿಧನ

0

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ, ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಮೊದ್ದೀನ್ ಸಾಹೇಬ್ (55ವ.) ಅವರು ಸೆ.21ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.


ಸಂಜೆ ಕೋಲ್ಪೆಯಲ್ಲಿದ್ದ ಮೊದ್ದೀನ್ ಅವರಿಗೆ ಮನೆಗೆ ಹೋದ ಬಳಿಕ ಎದೆನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು ಎಂದು ವರದಿಯಾಗಿದೆ. ಮೊದ್ದೀನ್ ಅವರು ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಎರಡು ಅವಧಿಗೆ ಒಟ್ಟು ಆರು ವರ್ಷ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಪ್ರಸ್ತುತ ಕೋಲ್ಪೆ ಖಲಂದರ್ ಷಾ ದಫ್ ಸಮಿತಿ ಉಪಾಧ್ಯಕ್ಷರಾಗಿದ್ದರು. ಲಾರಿ ಚಾಲಕರಾಗಿ ಹಲವು ವರ್ಷ ದುಡಿದಿದ್ದ ಇವರು ಕರ್ನಾಟಕ ರಾಜ್ಯ ಲಾರಿ ಚಾಲಕರ ಟ್ರೇಡ್ ಯುನಿಯನ್ (ಕೆಎಸ್‌ಟಿಯು) ಗೌರವಾಧ್ಯಕ್ಷರಾಗಿ ಲಾರಿ ಚಾಲಕರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡುತ್ತಿದ್ದರು. ಇತ್ತೀಚಿನ ಕೆಲ ವರ್ಷಗಳಿಂದ ಊರಿನಲ್ಲೇ ಇದ್ದು ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿದ್ದರು. ಮೃತರು ತಾಯಿ, ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here