ಪುತ್ತೂರು ವಲಯ ಮಟ್ಟದ ಕ್ರೀಡಾಕೂಟ : ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನ

0

ಬಡಗನ್ನೂರು: ನೆಟ್ಟಣಿಗೆ ಮೂಡ್ನೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.

  • 8ನೇ ತರಗತಿ ಶ್ರೀಕಲಾ – ಗುಂಡು ಎಸೆತ ಪ್ರಥಮ, ಚಕ್ರ ಎಸೆತ ತೃತೀಯ
  • 10ನೇ ತರಗತಿ ಜೀವಿತಾ – 200 ಮೀ. ಓಟ ದ್ವಿತೀಯ, 100 ಮೀ. ಓಟ ತೃತೀಯ
  • 8ನೇ ತರಗತಿ ಅದ್ವಿತ್ ಶೆಟ್ಟಿ – ಎತ್ತರ ಜಿಗಿತ ಪ್ರಥಮ
  • 8ನೇ ತರಗತಿ ಹರ್ಷಿಕಾ – ಎತ್ತರ ಜಿಗಿತ ತೃತೀಯ
  • 10ನೇ ತರಗತಿ ದೀಪಕ್ – ಗುಂಡು ಎಸೆತ ದ್ವಿತೀಯ
  • ರಿಲೇ – 9ನೇ ತರಗತಿಯ ಸುಹಾನ, ಕಾವ್ಯ, ಸುಪ್ರದಾಲಕ್ಷ್ಮಿ, 10ನೇ ತರಗತಿಯ ಜೀವಿತಾ ತೃತೀಯ

ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ ಎಂ. ಮತ್ತು ಗೋಪಿನಾಥ್ ತರಬೇತಿ ನೀಡಿದ್ದರು. ವಿಜೇತ ವಿದ್ಯಾರ್ಥಿಗಳು ಹಾಗೂ ತರಬೇತಿದಾರರಿಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here