ಪುತ್ತೂರು ಸಾಲ್ಮರ ರೈಲ್ವೆ ಅಂಡರ್ ಪಾಸ್‌ಗೆ ವಿದ್ಯುತ್ ದೀಪಕ್ಕೆ NOC – ಎಸಿ ಸ್ಟೆಲ್ಲಾ ವರ್ಗೀಸ್ ಶ್ರಮಕ್ಕೆ ಫಲ – ಮನವಿ ಸಲ್ಲಿಸಿದ್ದ ನೂರುದ್ದೀನ್ ಸಾಲ್ಮರ

0

ಪುತ್ತೂರು: ಪುತ್ತೂರು ಸಾಲ್ಮರದ ರೈಲ್ವೆ ಅಂಡರ್ ಪಾಸಿನಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಅನುಭವಿಸುತ್ತಿದ್ದ ಸಮಸ್ಯೆ ಬಗ್ಗೆ ನ್ಯಾಯವಾದಿ ಹಾಗೂ ಕೆಪಿಸಿಸಿ ಸಂಯೋಜಕ ನೂರುದ್ದೀನ್ ಸಾಲ್ಮರ ಅವರು ಪುತ್ತೂರು ಸಹಾಯಕ ಕಮಿಷನರ್‌ಗೆ ಮನವಿ ಸಲ್ಲಿಸಿದ್ದರು.

ಮನವಿಗೆ ತಕ್ಷಣ ಸ್ಪಂದಿಸಿದ ಸಹಾಯಕ ಕಮಿಷನರ್ ಕುಮಾರಿ ಸ್ಟೆಲ್ಲಾ ವರ್ಗೀಸ್ ಅವರು ಈ ಹಿಂದೆ APMC ರಸ್ತೆ ಮೂಲಕ ಪುತ್ತೂರು-ಉಪ್ಪಿನಂಗಡಿ ಮುಖ್ಯರಸ್ತೆಗೆ ಸೇರುವ ರಸ್ತೆಗಳ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದರು. ಆದರೆ ಅಂಡರ್ ಪಾಸ್ ಒಳಗೆ ವಿದ್ಯುತ್ ದೀಪ ಅಳವಡಿಕೆಗೆ ರೈಲ್ವೆ ಇಲಾಖೆಯ NOC ಅಗತ್ಯವಿತ್ತು.

ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಎಸಿ ಅವರು ಮೈಸೂರು ವಿಭಾಗದ ನೈಋತ್ಯ ರೈಲ್ವೆ ಇಲಾಖೆಯೊಂದಿಗೆ ನಿರಂತರ ಪತ್ರ ವ್ಯವಹಾರ ನಡೆಸಿದರು. ಅವರ ಶ್ರಮದ ಫಲವಾಗಿ ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ಇಂಜಿನಿಯರ್ ರೋಹನ್ ಡೊಂಗ್ರೆ ಅವರು ಸೆ.19, 2026ರಂದು ಪುತ್ತೂರು ನಗರಸಭೆಗೆ ಅಧಿಕೃತ NOC ನೀಡಿದ್ದಾರೆ. RUB No. 508A, ಕಬಕ-ಪುತ್ತೂರು ಸ್ಟೇಷನ್ ಯಾರ್ಡ್, ಹಾಸನ-ಮಂಗಳೂರು ವಿಭಾಗದಲ್ಲಿ ಬೀದಿ ದೀಪ ಅಳವಡಿಸಲು ಅನುಮತಿ ದೊರೆತಿದೆ.

ಇದರಿಂದ ಕೆಲವೇ ದಿನಗಳಲ್ಲಿ ಈ ಭಾಗದಲ್ಲಿ ವಿದ್ಯುತ್ ದೀಪಗಳು ಬೆಳಗಲಿದ್ದು, ರಾತ್ರಿ ವೇಳೆ ಪಾದಚಾರಿಗಳು ಮತ್ತು ವಾಹನ ಸವಾರರು ನೆಮ್ಮದಿಯಿಂದ ಸಂಚರಿಸಲು ಸಾಧ್ಯವಾಗಲಿದೆ.

ಅಂಡರ್ ಪಾಸಿನ ದ್ವಿಮುಖ ರಸ್ತೆ ಕಾಮಗಾರಿ ಭೂಸ್ವಾಧೀನ ತೊಡಕಿನಿಂದ ಒಂದು ಬದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಈ ಸಮಸ್ಯೆಗೂ ಎಸಿ ಅವರು ವಿಶೇಷ ಗಮನ ಹರಿಸಿರುವುದರಿಂದ ಶೀಘ್ರ ಪರಿಹಾರ ದೊರೆಯುವ ಲಕ್ಷಣವಿದೆ.

ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಜನಪರ ಕಾರ್ಯ ಮಾಡುತ್ತಿರುವ ಎಸಿ ಸ್ಟೆಲ್ಲಾ ವರ್ಗೀಸ್ ಅವರ ಕಾರ್ಯಕ್ಕೆ ಸಾರ್ವಜನಿಕರ ಪರವಾಗಿ ನೂರುದ್ದೀನ್ ಸಾಲ್ಮರ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here