ಮುಂಡೂರಿನಲ್ಲಿ ಇಲೆಕ್ಟ್ರಿಕಲ್ ಆರ್.ಟಿ.ಓ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಚಾಲನೆ : ವಲಯ ಕಾಂಗ್ರೆಸ್‌ನಿಂದ ಸರ್ವಧರ್ಮೀಯ ಪ್ರಾರ್ಥನೆ

0

ಪುತ್ತೂರು: ಮುಂಡೂರಿನಲ್ಲಿ ಇಲೆಕ್ಟ್ರಿಕಲ್ ಆರ್.ಟಿ.ಓ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಸೆ.23ರಂದು ಚಾಲನೆ ನೀಡಲಾಯಿತು.

ಶಾಸಕ ಅಶೋಕ್ ಕುಮಾರ್ ರೈಯವರ ಸತತ ಪ್ರಯತ್ನದಿಂದ ಮಂಜೂರುಗೊಂಡಿರುವ ಈ ಮಹತ್ವದ ಯೋಜನೆಗೆ ಮುಂಡೂರು ವಲಯ ಕಾಂಗ್ರೆಸ್ ವತಿಯಿಂದ ಸ್ಥಳೀಯ ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ, ಬೂತ್ ಅಧ್ಯಕ್ಷರುಗಳಾದ ಪದ್ಮಯ್ಯ ಬಂಡಿಕಾನ ಹಾಗೂ ಇಬ್ರಾಹಿಂ ಮುಲಾರ್, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ರಜಾಕ್ ಮುಲಾರ್, ಸ್ಥಳೀಯರಾದ ರಮೇಶ್ ಗುತ್ತಿನಪಾಲು, ಹನೀಫ್ ಮುಂಡೂರು, ಪದ್ಮಯ್ಯ ಗೌಡ ಗುತ್ತಿನಪಾಲು, ಅರುಣ್ ಗುತ್ತಿನಪಾಲು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here