







ಎಸ್ಕೆಎಸ್ಸೆಸ್ಸೆಫ್ ಕಟ್ಟತ್ತಾರು ಶಾಖೆಯ ಮಹಾ ಸಭೆ ಶಾಖಾ ಅಧ್ಯಕ್ಷ ಕೆ.ಪಿ ಅಶ್ರಫ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಬೀರ್ ಉಸ್ತಾದ್ ದುವಾದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶಫೀಕ್ ರಹ್ಮಾನಿ ಕಟ್ಟತ್ತಾರು ಉದ್ಘಾಟಿಸಿ ಮಾತನಾಡಿದರು.


ಸ್ವಾದಿಕ್ ಮುಸ್ಲಿಯಾರ್ ವರದಿ ಲೆಕ್ಕ ಪತ್ರ ಮಂಡಿಸಿದರು. ನಂತರ ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ನಾಯಕರಾದ ಮನ್ಸೂರ್ ಅಸ್ಲಮಿ ಹಾಗೂ ರಫೀಕ್ ಫೈಝಿ ಮಾಡನ್ನೂರು ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕೆ.ಪಿ. ಅಶ್ರಫ್ ಕಟ್ಟತ್ತಾರು, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಮುಸ್ಲಿಯಾರ್ ಕಟ್ಟತ್ತಾರು, ಕೋಶಾಧಿಕಾರಿಯಾಗಿ ಯೂಸುಫ್ ಟಿ.ಎಂ. ಕಟ್ಟತ್ತಾರು, ಉಪಾಧ್ಯಕ್ಷರುಗಳಾಗಿ ಜುಬೈರ್ ಕಟ್ಟತ್ತಾರು, ಅಬ್ಬಾಸ್ ನಿಡ್ಯಾನ ಹಾಗೂ ಆಬೂಬಕ್ಕರ್ (ಅಬ್ಬು) ಕಟ್ಟತ್ತಾರು, ವರ್ಕಿಂಗ್ ಕಾರ್ಯದರ್ಶಿಯಾಗಿ ಮಿಕ್ದಾದ್ ಕಟ್ಟತ್ತಾರು, ಜೊತೆ ಕಾರ್ಯದರ್ಶಿಗಳಾಗಿ ತಮೀಮ್ ಕಟ್ಟತ್ತಾರು, ಹಸೈನಾರ್ ಬಿ.ಕೆ ಕಟ್ಟತ್ತಾರು ಹಾಗೂ ಫಾರೂಕ್ ಎಸ್ ಕಟ್ಟತ್ತಾರು ಆಯ್ಕೆಯಾದರು.



ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಬೀರ್ ಉಸ್ತಾದ್, ರಶೀದ್ ಯಮಾನಿ, ಶಾಫಿ ನಿಡ್ಯಾನ, ಅನ್ವರ್ ಅಲಿ ಹಾಗೂ ಸಮದ್ ನಿಡ್ಯಾನ ಆಯ್ಕೆಯಾದರು. ವಿಖಾಯ ಕಾರ್ಯದರ್ಶಿಯಾಗಿ ನವೀದ್ ನಿಡ್ಯಾನ, ಇಬಾದ್ ಕಾರ್ಯದರ್ಶಿಯಾಗಿ ಶಫೀಕ್ ರಹ್ಮಾನಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ರಶೀದ್ ಯಮಾನಿ ಆಯ್ಕೆಗೊಂಡರು. ಕ್ಲಸ್ಟರ್ ಕೌನ್ಸಿಲ್ ಸದಸ್ಯರಾಗಿ ಜಲೀಲ್ ಅರ್ಶದಿ, ಎ.ಕೆ ನಿಝಾರ್, ತಮೀಮ್, ಫಾರುಕ್, ಮಿಕ್ದಾದ್, ರಶೀದ್ ಯಮಾನಿ, ಶಫೀಕ್ ರಹ್ಮಾನಿ, ಹಾಶಿಮ್, ಸೈಯದ್ ಅಲವಿ ಹಾಗೂ ಶಫೀಕ್ ಬಿ.ಕೆ. ಅವರನ್ನು ಆಯ್ಕೆ ಮಾಡಲಾಯಿತು. ಮಿಕ್ದಾದ್ ವಂದಿಸಿದರು.










