







ಆಲಂಕಾರು: ರಾಮಕುಂಜ ಗ್ರಾಮದ ಕುಂಡಾಜೆ ಯಾಕುಬ್ ಅವರ ಪುತ್ರ ಇಹಿಸಾನುಲ್ ಅಹಮ್ಮದ್ (22) ಸೆ.21ರಂದು ಸ್ವಗೃಹದಲ್ಲಿ ನಿಧನರಾದರು.


ಕುಂಡಾಜೆ ಪರಿಸರದಲ್ಲಿ ಚಿರಪರಿಚಿತನಾಗಿದ್ದ ಇಹಿಸಾನುಲ್ ಅಹಮ್ಮದ್ ತನ್ನ ಬಂಧುಬಳಗದವರೊಂದಿಗೆ ಅನ್ಯೋನ್ಯತೆಯಿಂದ ಇದ್ದರು.ಏಂಡೋ ಸಂತ್ರಸ್ತನಾಗಿದ್ದು 150 ಕೆ.ಜಿ ತೂಕ ಹೊಂದಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೆ.21 ರಂದು ನಿಧನರಾದರು.



ಮೃತರು ತಂದೆ ಯಾಕುಬ್,ತಾಯಿ ನಸೀಮಾ ತಮ್ಮ ಮೊಹಮ್ಮದ್ ಇರ್ಫಾನ್, ತಂಗಿಯಂದಿರಾದ ಫಾತಿಮತುಲ್ ಫರ್ಝೂನ,ಆಯಿಶತ್ ಫಮಿಝ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.










