







ಈ ಕಾಲೇಜು ನನಗೆ ಕೇವಲ ಶಿಕ್ಷಣ ನೀಡಲಿಲ್ಲ , ಕಳೆದು ಹೊಗಿದ್ದ ಆತ್ಮವಿಶ್ವಾಸವನ್ನು ಮತ್ತೆ ತಂದುಕೊಟ್ಟಿತ್ತು : ಹಿರಿಯ ವಿದ್ಯಾರ್ಥಿ ಮಹಮ್ಮದ್ ಅರ್ಷಕ್


ಪುತ್ತೂರು: ಕಪ್ಪತ್ತಗಿರಿ ಫೌಂಡೇಶನ್ (ರಿ) ಕಳಾಸಪುರ ಗದಗ ಕಪ್ಪತ್ತಗಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ರಾಜ್ಯಘಟಕ ಕಳಾಸಪುರ ಗದಗ ಇದರ ವತಿಯಿಂದ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್ನ ಪ್ರಾಂಶುಪಾಲೆ ಹೇಮಲತಾ ಗೋಕುಲ್ ನಾಥ್ ಅವರಿಗೆ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಅಭಿನಂದನಾ ಸಮಾರಂಭವನ್ನು ಸೆ. 24 ರಂದು ಹಮ್ಮಿಕೊಂಡರು.




ಈ ಸಂಧರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್ ನಾಥ್ ಅವರು ಸಂಸ್ಥೆಯು ನಡೆದು ಬಂದ ಹಾದಿ , ಹೇಮಲತಾ ಗೋಕುಲ್ ನಾಥ್ ಅವರ ಶ್ರಮವನ್ನು ತಿಳಿಸಿ ಅಭಿನಂದಿಸಿದರು.
ಸಂಸ್ಥೆಯ ಮುಖ್ಯಶಿಕ್ಷಕಿ ಪ್ರಮೀಳಾ .ಎನ್ ಡಿ ಮಾತನಾಡಿ, 30 ವರ್ಷಗಳ ಅವಿರತ ಶ್ರಮಕ್ಕೆ ಸಂದ ಗೌರವ ಎಂದು ಅಭಿನಂದಿಸಿದರು.ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಮಾಧವಿ.ಎನ್.ಸಿ ಅವರು ಮಾತನಾಡಿ, ಸಾಧನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಇನ್ನಷ್ಟು ಪ್ರಶಸ್ತಿ ಕೀರ್ತಿ ಲಭಿಸಲಿ ಎಂದು ಅಭಿನಂಧಿಸಿದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮಹಮ್ಮದ್ ಅರ್ಷಕ್ ಮಾತನಾಡಿ, ನಾನು ಒಂದು ಖಾಸಗಿ ಫ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಕೆಲವು ಕಹಿ ಘಟನೆಗಳಿಂದಾಗಿ ಮತ್ತು ಮಾನಸಿಕ ಕಿರುಕುಳದಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದೆ. ಆ ನೋವನ್ನು ತಡೆಯಲಾರದೆ ನಾನು ಶಾಲೆಯನ್ನು ಬಿಡಬೇಕಾಯಿತು. ಮುಂದಿನ ದಾರಿ ಕಾಣದೇ , ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡು ಸತತ 4 ವರ್ಷಗಳ ಕಲ ಮನೆಯಲ್ಲೆ ಕುಳಿತ್ತಿದ್ದೆ. ನನ್ನ ಜೀವನ ಅಲ್ಲಿಗೆ ಮುಗಿಯಿತು ಅಂದುಕೊಂಡಿದ್ದ ದಿನಗಳಾವು.ಆದರೆ ,ಕತ್ತಲೆಯ ನಂತರ ಬೇಳಕು ಬಂದೇ ಬರುತ್ತದೆ. ನನ್ನ ಜೀವನದ ಆ ಕತ್ತಲೆಯ ಹಾದಿಯಲ್ಲಿ ದಾರಿ ದೀಪವಾಗಿ ಸಿಕ್ಕಿದೇ ಪ್ರಗತಿ ಸ್ಟಡಿ ಸೆಂಟರ್.ಇಲ್ಲಿಗೇ ಸೇರಿದ ನಂತರ ನನ್ನಲ್ಲಿ ಹೊಸ ಆಶಾಕಿರಣ ಮೂಡಿತು.ಖಾಸಗಿಯಾಗಿ ನೇರ ಪರೀಕ್ಷೆ ಬರೆಯುವ ಮೂಲಕ ನಾನು ನನ್ನ 10ನೇ ತರಗತಿ ಹಾಗೂ ಪಿಯುಸಿ ಶಿಕ್ಷಣವನ್ನು ಯಶಸ್ವಿಯಾಗಿ ಪ್ರಗತಿ ಸ್ಟಡಿ ಸೆಂಟರ್ನಲ್ಲಿ ಉನ್ನತ್ತ ಶ್ರೇಣಿಯಲ್ಲಿ ಮುಗಿಸಿದೆ.ಅಲ್ಲಿಂದ ಮುಂದೆ ನನ್ನ ಕನಸುಗಳಿಗೆ ರೆಕ್ಕೆ ಸಿಕ್ಕಿದ್ದು ಈ ನಮ್ಮ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವೀಯೇಶನ್ & ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ನಾನು AASSC (AIROSPACE AND AVIATION SECTOR SKILL COUNCIL) ಇದರ ಅಧಿನದ ಡಿಪ್ಲೋಮಾವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಈ ಕಾಲೇಜು ನನಗೆ ಕೇವಲ ಶಿಕ್ಷಣ ನೀಡಲಿಲ್ಲ , ಕಳೆದು ಹೊಗಿದ್ದ ನನ್ನ ಆತ್ಮ ವಿಶ್ವಾಸವನ್ನು ಮತ್ತೆ ತಂದುಕೊಟ್ಟಿತ್ತು.ಇದರ ಫಲವಾಗಿ ಇಂದು ನಾನು ಹೆಮ್ಮೆಯಿಂದ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇತ್ತೀಚೆಗೆ ನಾನು AKASA AIRLINES ಸಂಸ್ಥೆಯ ಸಂದರ್ಶನದಲ್ಲಿ ಭಾಗವಹಿಸಿದ್ದೆ.ಅತ್ಯಂತ ಕಠಿಣವಾದ 3 ಹಂತದ ಸಂದರ್ಶನಗಳನ್ನು ಯಶಸ್ವಿಯಾಗಿ ತೇರ್ಗಡೆ ಹೊಂದಿದ್ದು ಈಗ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದೇನೆ . ಈ ಹಿಂದೆ ಫ್ರೌಢಶಿಕ್ಷಣದಿಂದ ಹೊರಬಿದ್ದಿದ ನಾನು ಇಂದು ಆಕಾಶದಲ್ಲಿ ಹಾರಲು ಸಿದ್ಧನಾಗಿದ್ದೇನೆ ಎಂದರು.

ಸಂಸ್ಥೆಯ ಕಾಲೇಜು ನಾಯಕ ಅಖಿಲೇಶ್ ಅನುಭವವನ್ನು ಹಂಚಿಕೊಂಡು ಅಭಿನಂದಿಸಿದರು .ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಫಾತಿಮತ್ ಫಿಝಾ , ಪ್ರಭಾಕರ್ ರೈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಸಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










