ನಿಡ್ಪಳ್ಳಿಯಲ್ಲಿ ನಾಯಿಗಳಿಗೆ ರೇಬೀಸ್ ರೋಗ ನಿರೋಧಕ ಉಚಿತ ಲಸಿಕಾ ಶಿಬಿರ ಉದ್ಘಾಟನೆ

0

ನಿಡ್ಪಳ್ಳಿ: ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು,ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಂಗಳೂರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು, ಪಶುವೈದ್ಯ ಆಸ್ಪತ್ರೆ ಪಾಣಾಜೆ, ಮಹಾತ್ಮ ಗಾಂಧಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಇವರ ಜಂಟಿ ಅಶ್ರಯದಲ್ಲಿ ನಾಯಿಗಳಿಗೆ ರೇಬೀಸ್ ರೋಗ ನಿರೋಧಕ ಉಚಿತ ಲಸಿಕಾ ಶಿಬಿರ ಉದ್ಘಾಟನೆ ಸೆ.24 ರಂದು ನಿಡ್ಪಳ್ಳಿ ಗ್ರಾಮ ಪಂಚಾಯಿತಿನಲ್ಲಿ ನಡೆಯಿತು.

  ಪಾಣಾಜೆ ಪಶು ಆಸ್ಪತ್ರೆಯ ಪ್ರಭಾರ ಜಾನುವಾರು ಅಧಿಕಾರಿ ವೀರಪ್ಪ ದೀಪ ಬೆಳಗಿಸಿ ನಾಯಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು.ಕಿರಿಯ ಪಶು ವೈದ್ಯಕೀಯ ಪರೀಕ್ಷಕ  ರೋಹಿತ್ ಲಸಿಕೆ ಹಾಕಿದರು.ಹೊರಗುತ್ತಿಗೆ ನೌಕರ ಪ್ರದೀಪ್ , ನಿಡ್ಪಳ್ಳಿ ಗ್ರಾಮದ ಪಶು ಸಖಿ ತೇಜಸ್ವಿನಿ. ಎಮ್ ಸಹಕರಿಸಿದರು.ನಿಡ್ಪಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ  ಶಿವರಾಮ ಮೂಲ್ಯ ಸ್ವಾಗತಿಸಿ ವಂದಿಸಿದರು.ಸಿಬ್ಬಂದಿಗಳಾದ ವಿನೀತ್ ಕುಮಾರ್,ರೇವತಿ, ಜಯಕುಮಾರಿ, ಗ್ರಂಥಪಾಲಕಿ ಪವಿತ್ರ ಸಹಕರಿಸಿದರು.

ಗ್ರಾಮದ ವಿವಿಧ ಕಡೆ ಶಿಬಿರ ನಡೆಸಿ ಒಟ್ಟು 245 ನಾಯಿಗಳಿಗೆ ಮತ್ತು 2 ಬೆಕ್ಕುಗಳಿಗೆ ಲಸಿಕೆ ಹಾಕಲಾಯಿತು.

LEAVE A REPLY

Please enter your comment!
Please enter your name here