ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ 22ನೇ ಬಂಪರ್ ಡ್ರಾ – ಬಹುಮಾನ ಹಸ್ತಾಂತರ

0

ಪುತ್ತೂರು: ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಮಳಿಗೆ ತಾಲೂಕು ಕಚೇರಿ ರಸ್ತೆಯ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ನಡೆದ 22ನೇ ಬಂಪರ್ ಡ್ರಾ.ದ ಬಂಪರ್ ಬಹುಮಾನ ಟಿವಿಎಸ್ ಜ್ಯುಪಿಟರ್ ಹಸ್ತಾಂತರ ಕಾರ್ಯಕ್ರಮ ಮಳಿಗೆಯಲ್ಲಿ ನಡೆಯಿತು.


ಮಳಿಗೆಯಲ್ಲಿ ವಿವಿಧ ಹಬ್ಬಗಳ ಪ್ರಯುಕ್ತ ಲಕ್ಕಿ ಕೂಪನ್ ಆಯೋಜಿಸಿ ರೂ.2೦೦೦ ಖರೀದಿಗೆ ಉಚಿತ ಕೂಪನ್ ಪಡೆದು ಬಂಪರ್ ಬಹುಮಾನ ಗೆಲ್ಲುವ ಅವಕಾಶ ಗ್ರಾಹಕರಗೆ ಒದಗಿಸುತ್ತಿದೆ. ಈ ಬಾರಿಯ ಬಂಪರ್ ಬಹುಮಾನ ಸೆ.20ರಂದು ನಡೆದಿದ್ದು ಇದರ ಬಹುಮಾನ ಹಸ್ತಾಂತರ ಕಾರ್ಯಕ್ರಮ ಸೆ.24ರಂದು ನಡೆಯಿತು.


ಉಪ್ಪಿನಂಗಡಿಯ ಹೇಮಾವತಿ ಕಂಜೂರು(28456)ರವರು ಬಂಪರ್ ಬಹುಮಾನ ಟಿವಿಎಸ್ ಜ್ಯುಪಿಟರ್ ವಿಜೇತರಾಗಿ ಆಯ್ಕೆಯಾಗಿದ್ದು ಅವರಿಗೆ ಟಿವಿಎಸ್ ಜ್ಯುಪಿಟರ್ ಹಸ್ತಾಂತರಿಸಲಾಯಿತು.

ಉಳಿದಂತೆ ಎಲ್‌ಇಡಿ ಟಿವಿ ವಿಜೇತರಾಗಿ ಒಳಕುಮೇರಿಯ ಅಶೋಕ್ ನಾಯಕ್, ವಾಷಿಂಗ್ ಮಷೀನ್ ವಿಜೇತರಾಗಿ ಆಯೇಷಾತುಲ್ ಮುರ್ಶಿದಾ, ಮಿಕ್ಸರ್ ಗ್ರೈಂಡರ್ ವಿಜೇತರಾಗಿ ಕುಂಬ್ರದ ಲತಾ ಎಸ್.ಕೆ, ಸವಣೂರು ಶಾಂತಿನಗರದ ಅಶ್ರಫ್ ಯು, ನೆಕ್ಕಿಲಾಡಿಯ ಪುರುಷೋತ್ತಮ, ಫ್ಯಾನ್ ವಿಜೇತರಾಗಿ ಬೀಟಿಗೆ ಕೆದಿಲದ ಸಲೀಂ, ಕುಕ್ಕರ್ ವಿಜೇತರಾಗಿ ತಿಂಗಳಾಡಿಯ ನಾಗವೇಣಿ, ಐರನ್ ಬಾಕ್ಸ್‌ಗಳ ವಿಜೇತರಾಗಿ ದಿ ಪುತ್ತೂರು ಕ್ಲಬ್ ಮತ್ತು ಗೋಪಾಲಕೃಷ್ಣರವರು ವಿಜೇತರಾಗಿದ್ದು ಅವರಿಗೆ ಮಾಲಕರಾದ ರೂಪೇಶ್ ಶೇಟ್ ಮತ್ತು ಪವಿತ್ರಾ ರೂಪೇಶ್ ಶೇಟ್‌ರವರು ಬಹುಮಾನ ಹಸ್ತಾಂತರಿಸಿದರು. ಸಿಬ್ಬಂದಿಗಳು ಸಹಕರಿಸಿದರು.


ಬಂಪರ್ ಬಹುಮಾನ ಟಿವಿಎಸ್ ಜ್ಯುಪಿಟರ್ ವಿಜೇತರಾದ ಉಪ್ಪಿನಂಗಡಿಯ ಹೇಮಾವತಿ ಕಂಜೂರು ಮಾತನಾಡಿ ಯಾವುದೇ ಇಲೆಕ್ಟ್ರಾನಿಕ್ಸ್ ಉಪಕರಣ ಖರೀದಿಗೆ ನನ್ನ ಮೊದಲ ಆಯ್ಕೆ ಶೇಟ್ ಇಲೆಕ್ಟ್ರಾನಿಕ್ಸ್ ಆಗಿರುತ್ತದೆ ಎಂದರು. ಮಳಿಗೆಯ ಮಾಲಕರಾದ ರೂಪೇಶ್ ಶೇಟ್ ಮಾತನಾಡಿ ಗ್ರಾಹಕರ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿ ವಿಜೇತರಿಗೆ ಅಭಿನಂದನೆ ಸಲ್ಲಿಸಿ ಗ್ರಾಹಕರು ಮುಂದೆಯೂ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿದರು. ಬಹುಮಾನ ಸ್ವೀಕರಿಸಿದ ವಿಜೇತರು ಮಳಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here