







ಅಧ್ಯಕ್ಷರಾಗಿ ವಿಜಯ ಕುಮಾರ್ ಅಗಳಿ, ಕಾರ್ಯದರ್ಶಿಯಾಗಿ ಜಗದೀಶ್ ಅಗಳಿ


ಕಾಣಿಯೂರು: ಅಗಳಿ ಶ್ರೀ ಸದಾಶಿವ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆಯು ಶ್ರೀ ಸದಾಶಿವ ಕ್ರೀಡಾಂಗಣದಲ್ಲಿ ನಡೆದ ಯುವಕ ಮಂಡಲದ ಸಭೆಯಲ್ಲಿ ನಡೆಯಿತು. ಯುವಕ ಮಂಡಲದ ಅಧ್ಯಕ್ಷರಾಗಿ ವಿಜಯ ಕುಮಾರ್ ಅಗಳಿ, ಕಾರ್ಯದರ್ಶಿಯಾಗಿ ಜಗದೀಶ್ ಅಗಳಿ, ಉಪಾಧ್ಯಕ್ಷರಾಗಿ ತಾರಾನಾಥ ಎ. ಎನ್, ಜತೆ ಕಾರ್ಯದರ್ಶಿಯಾಗಿ ಭವತ್ ಅಗಳಿ, ಕೋಶಾಧಿಕಾರಿಯಾಗಿ ಲವಪ್ರಸಾದ್ ಅಗಳಿ ಅವರನ್ನು ಆಯ್ಕೆ ಮಾಡಲಾಯಿತು.













