ಸೆ. 26 – 28 : ಪುತ್ತೂರು ಟೌನ್ ಬ್ಯಾಂಕ್ ಹಾಲ್‌ನಲ್ಲಿ “ವೈಭವಂ ಫ್ಯಾಶನ್ ಮೇಳ” – ಲಕ್ಕಿ ಡ್ರಾ ಗೆಲ್ಲುವ ಅವಕಾಶ, ಶೇ 40 ರಿಯಾಯಿತಿ

0

ಪುತ್ತೂರು: ದೀಪಮ್ ಪ್ರಸ್ತುತ ಪಡಿಸುವ ವೈಭವಂ ಫ್ಯಾಶನ್ ಮೇಳ ಸೆ. 26 ರಿಂದ 28 ರತನಕ ಪುತ್ತೂರು ಟೌನ್ ಬ್ಯಾಂಕ್ ಹಾಲ್‌ನಲ್ಲಿ ಬೆಳಿಗ್ಗೆ 9.30 ರಿಂದ ರಾತ್ರಿ 8 ರತನಕ ನಡೆಯಲಿದೆ. ವೈಭವಂ ಫ್ಯಾಶನ್ ಮೇಳದಲ್ಲಿ ವಿವಿಧ ವಿನ್ಯಾಸದ ಸೀರೆಗಳು, ಚೂಡಿದಾರ್ ಸೆಟ್‌ಗಳು, 1 ಗ್ರಾಂ, ಚಿನ್ನದ ಅಭರಣಗಳು, ಬ್ಯಾಗ್‌ಗಳು,ಅಲಂಕಾರಿಕ ವಸ್ತಗಳು, ಆಯುರ್ವೇದ ಉತ್ವನ್ನಗಳು, ದೇಶಿ ತಳಿ ತರಕಾರಿ ಬೀಜಗಳು, ಚೆನ್ನಪಟ್ಟಣದ ಅಟಿಕೆಗಳು, ಪಂಚಲೋಹದ ಅಭರಣಗಳು, ಪುರುಷರ, ಮಕ್ಕಳ ಉಡುಪುಗಳು ಮತ್ತು ಇತರ ವಸ್ತುಗಳು ಲಭ್ಯವಿದೆ.


ಸೆ.26 : ಉದ್ಘಾಟನಾ ಸಮಾರಂಭ
ಫ್ಯಾಶನ್ ಮೇಳ ನಡೆಯುವ ಪುತ್ತೂರು ಟೌನ್ ಬ್ಯಾಂಕ್ ಹಾಲ್‌ನಲ್ಲಿ ಸೆ. 26 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವೀಣಾ ಶೆಟ್ಟಿ ಮಂಗಳೂರು, ಗೌರಿ ಬನ್ನೂರು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಗೀತಾ ಮೋಹನ್ ರೈ ನರಿಮೊಗರು, ಸಂಪ್ಯ ಠಾಣೆಯ ಪೊಲೀಸ್ ಅಧಿಕಾರಿ ಸುಶ್ಮಾ, ಡಾ. ಅನಿಲಾ ದೀಪಕ್ ಶೆಟ್ಟಿ, ಸಬಿತಾ ಭಂಡಾರಿ ದರ್ಬೆ ಪುತ್ತೂರು, ಅನಿತಾ ಹೇಮನಾಥ ಶೆಟ್ಟಿ ಕಾವು, ರವೀಂದ್ರ ರೈ ದಕ್ಷ ಕನ್ಸ್‌ಸ್ಟ್ರಕ್ಷನ್, ನಯನಾ ರೈ ನೆಲ್ಲಿಕಟ್ಟೆ, ಮನೋರಮಾ ಸೂರ್ಯ, ಚಂದ್ರಪ್ರಭಾ ಗೌಡ ಪುತ್ತೂರು, ಲತಾ ಪದ್ಮನಾಭ ರೈ ಪುತ್ತೂರು, ಲೀನಾ ಮಾಚದೋ, ಮಾಧವಿ ಮನೋಹರ್ ರೈ, ಜಯಂತಿ ಬಲ್ನಾಡು, ದಿವ್ಯಾ ಕೆ.ಶೆಟ್ಟಿ ಸೆನೋರಿಟಾ ಪುತ್ತೂರು ಭಾಗವಹಿಸಲಿದ್ದಾರೆ ಎಂದು ಕಾರ್‍ಯಕ್ರಮದ ಆಯೋಜಕರಾದ, ಮಂಗಳೂರು ದೀಪಮ್ ಸಂಸ್ಥೆಯ ಸುಧಾ ಪ್ರಹ್ಲಾದ್ ಸುವರ್ಣ ಅವರು ತಿಳಿಸಿದ್ದಾರೆ.

ಗ್ರಾಹಕರಿಗೆ ಲಕ್ಕಿ ಡ್ರಾ ಮುಖಾಂತರ ಬಹುಮಾನ
ಗ್ರಾಹಕರಿಗೆ ಲಕ್ಕಿ ಡ್ರಾ ಮುಖಾಂತರ ವಿಶೇಷ ಬುಹುಮಾನ, ರೂ 2000, ರೂ. 1000, ರೂ 5೦೦, ಆಭರಣ, ವಸ್ತ್ರ ಗೆಲ್ಲುವ ಅವಕಾಶ ಇದೆ. ಅಲ್ಲದೇ ಮಕ್ಕಳ ಮತ್ತು ಪುರುಷರ ಉಡುಪುಗಳ ಮೇಲೆ 40 ಶೇ ರಿಯಾಯಿತಿ ಇದೆ.

ಹಳೆಯ ಕಾಂಚಿಪುರಂ ಸೀರೆ ಖರೀದಿ
ಮೂರು ದಿನಗಳ ಕಾಲ ನಡೆಯುವ ಫ್ಯಾಶನ್ ಮೇಳದಲ್ಲಿ ಹಳೆಯ ಕಾಂಚಿಪುರಂ ಸೀರೆಗಳನ್ನು ಉತ್ತಮ ಬೆಲೆಗೆ ಖರೀದಿಸಲಾಗುವುದು ಎಂದು ಕಾರ್‍ಯಕ್ರಮದ ಆಯೋಜಕರಾದ, ಮಂಗಳೂರು ದೀಪಮ್ ಸಂಸ್ಥೆಯ ಸುಧಾ ಪ್ರಹ್ಲಾದ್ ಸುವರ್ಣ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here