







ರಾಮಕುಂಜ: ಪ್ರತಿ ವರ್ಷ ಸೆಪ್ಟಂಬರ್ ತಿಂಗಳ 28ನೇ ತಾರೀಖಿನಂದು ಖ್ಯಾತ ವಿಜ್ಞಾನಿ ಪ್ಯಾಶ್ಚರ್‌ರವರ ಸ್ಮರಣಾರ್ಥ ವಿಶ್ವ ರೇಬಿಸ್ ದಿನ (ಹುಚ್ಚು ರೋಗ)ವನ್ನು ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ.
ರೇಬಿಸ್ ರೋಗ ಸಂಪೂರ್ಣ ಮಾರಣಾಂತಿಕವಾದರೂ ಸಕಾಲದಲ್ಲಿ ಮುಂಜಾಗ್ರತ ಕ್ರಮದಿಂದ ತಡೆಯಬಹುದು. ಈ ರೋಗವನ್ನು ನಿರ್ಮೂಲನೆ ಮಾಡಲಿಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ವಿಶ್ವ ರೇಬಿಸ್ ದಿನದ ಅಂಗವಾಗಿ ನೂತನವಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾದ ಕೊಯಿಲ ಪಶುವೈದ್ಯಕೀಯ ಕಾಲೇಜಿನಲ್ಲಿ ಸೆ.28ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ಉಚಿತವಾಗಿ ರೇಬಿಸ್ ರೋಗದ ವಿರುದ್ಧ ಲಸಿಕೆ ನೀಡಲಾಗುವುದು. ಅಲ್ಲದೆ ಪರಾವಲಂಬಿ ಜೀವಿಗಳ ಜಂತು ನಾಶಕ ಔಷಧ ಉಚಿತವಾಗಿ ನೀಡಲಾಗುವುದು. ಸುತ್ತಮುತ್ತಲಿನ ಸಾಕು ಪ್ರಾಣಿಗಳ ಮಾಲಕರು, ಜಾನುವಾರು ಮಾಲಕರು ಇದರ ಪ್ರಯೋಜನ ಪಡೆಯುವಂತೆ ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಎಂ.ಸಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












