







ಉಪ್ಪಿನಂಗಡಿ: ಯಕ್ಷಗಾನ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತ ಆಸಕ್ತಿ ತಾಳಿ ಅರ್ಥಗಾರಿಕೆಯಲ್ಲಿ ಉದಯೋನ್ಮುಖ ಬಾಲ ಕಲಾವಿದನಾಗಿ ಹೊರಹೊಮ್ಮುತ್ತಿರುವ ಸುಶಾಂತ್ ರಾವ್ ಬನ್ನೆಂಗಳರವರನ್ನು ಇಲ್ಲಿನ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಟಾನ (ರಿ) ಇದರ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಯಕ್ಷಗಾನ ಮೇರು ಕಲಾವಿದ ಪ್ರಭಾಕರ ಜೋಷಿ, ಭಾಸ್ಕರ ಬಾರ್ಯ, ಹರೀಶ್ ಆಚಾರ್ಯ , ಪ್ರದೀಪ ಕುಮಾರ್ ಕಲ್ಕೂರ , ಮಾಜಿ ಶಾಸಕ ಸಂಜೀವ ಮಠಂದೂರು, , ಸುವರ್ಣಮಹೋತ್ಸವ ಸಮಿತಿಯ ಅಧ್ಯಕ್ಷ ಡಿ ಚಂದಪ್ಪ ಮೂಲ್ಯ , ಸುರೇಶ್ ರಾವ್ ಬನ್ನೆಂಗಳ , ಗೀತಾ ಕುದ್ದಣ್ಣಾಯ ಮೊದಲಾದವರು ಉಪಸ್ಥಿತರಿದ್ದರು.













