ರಸ್ತೆಗೆ ಬಾಗಿರುವ ಒಣಗಿದ ಗೆಲ್ಲುಗಳು : ತೆರವಿಗೆ ಮುಂದಾಗದಿದ್ದಲ್ಲಿ ಅಪಾಯದ ಭೀತಿ

0

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು ಬಳಿ ಬೃಹತ್ ಮರವೊಂದರ ಒಣಗಿದ ಕೊಂಬೆಗಳು ರಸ್ತೆಗೆ ಬಾಗಿಕೊಂಡಿದ್ದು, ತಕ್ಷಣವೇ ಇದರ ತೆರವಿಗೆ ಮುಂದಾಗದಿದ್ದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.


ಹಳೆಗೇಟು ಬಳಿಯ ನೇತ್ರಾವತಿ ನದಿಯ ತೀರದಲ್ಲಿ ಬೃಹತ್ ದೇವದಾರು ಮರವೊಂದಿದ್ದು, ಆ ಮರವು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಬಾಗಿದೆ. ಈ ಮರದ ಮೂರ್‍ನಾಲ್ಕು ಗೆಲ್ಲುಗಳು ಒಣಗಿ ಹೋಗಿದ್ದು, ಒಂದು ವೇಳೆ ಅದೇನಾದರೂ ಮುರಿದು ಬಿದ್ದರೆ ಕೆಳಗಡೆಯಿಂದ ಹಾದು ಹೋಗುವ ರಸ್ತೆಯ ಮೇಲೆ ಬೀಳಲಿದೆ. ಇದರಿಂದ ವಾಹನ ಸವಾರರಿಗೆ ಅಪಾಯವುಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಅಪಾಯ ಸಂಭವಿಸುವ ಮುನ್ನ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಂಡು ಒಣಗಿದ ಗೆಲ್ಲುಗಳ ತೆರವಿಗೆ ಕ್ರಮ ಕೈಗೊಳ್ಳಬೇಕಿದೆ.

LEAVE A REPLY

Please enter your comment!
Please enter your name here