







ಅಧ್ಯಕ್ಷರಾಗಿ ಗಿರೀಶ್ ದೇವಸ್ಯ, ಕಾರ್ಯದರ್ಶಿಯಾಗಿ ಶೋಭಾ ಮೖೆಂದನಡ್ಕ


ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ಲದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಪುತ್ತೂರು ಇದರ ಸಹಭಾಗಿತ್ವದಲ್ಲಿ ಬಡಗನ್ನೂರು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ “ಎ” ಒಕ್ಕೂಟದ ನೂತನ ಅಧ್ಯಕ್ಷರಾಗಿ ಗಿರೀಶ್ ದೇವಸ್ಯ, ಕಾರ್ಯದರ್ಶಿಯಾಗಿ ಶೋಭಾ ಮೖೆಂದನಡ್ಕ ಇವರನ್ನು ಆಯ್ಕೆ ಮಾಡಲಾಯಿತು.



ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ನಾಯಕ್ ಮೇಗಿನಮನೆ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಪಿ ಹಾಗೂ ಕೋಶಾಧಿಕಾರಿಯಾಗಿ ಪುಷ್ಪ ಪದಡ್ಕ ರವರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ಕಾವು ವಲಯದ ವಲಯ ಮೆಲ್ವಿಚಾರಕಿ ಪ್ರಣೀತಾ, ಸೇವಾಪ್ರತಿನಿಧಿ ಸಾವಿತ್ರಿ ಪೊನ್ನೆತ್ತಡ್ಕ ಉಪಸ್ಥಿತರಿದ್ದರು..










