







ಪುತ್ತೂರು: ಉರ್ಲಾಂಡಿ ಶ್ರೀ ಸರಸ್ವತಿ ಭಜನಾ ಮಂದಿರದ 40ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆಯು ಸೆ.25ರಂದು ಮಂದಿರದಲ್ಲಿ ನಡೆಯಿತು. ಸರಸ್ವತಿ ಮಾತೆಯ ಗರ್ಭಗುಡಿಯಲ್ಲಿ ಆಮಂತ್ರಣ ಪತ್ರಿಕೆ ಇಟ್ಟು ಪ್ರಾರ್ಥನೆ, ಪೂಜೆ ಸಲ್ಲಿಸಿ, ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ಮಂದಿರದ ಪ್ರಧಾನ ಕಾರ್ಯದರ್ಶಿ ಶಿವಾನಂದ ಹೆಗ್ಡೆ ಪುರುಷರಕಟ್ಟೆ, ಜತೆ ಕಾರ್ಯದರ್ಶಿ ನರೇಶ್ ಹೆಗ್ಡೆ ಪೆರಿಯತ್ತೋಡಿ, ಕೋಶಾಧಿಕಾರಿ ಜಲಜಾಕ್ಷಿ ಹೆಗ್ಡೆ, ಜತೆ ಕೋಶಾಧಿಕಾರಿ ಸೂರ್ಯನಾರಾಯಣ ಹೆಗ್ಡೆ, ಪ್ರದೀಪ್ ಹೆಗ್ಡೆ, ದೀಕ್ಷಿತ್ಹೆಗ್ಡೆ, ಕೋಮಲ ವಾಸುದೇವ ಹೆಗ್ಡೆ, ಶ್ರೀಕಾಂತ್ ಹೆಗ್ಡೆ, ಸಮರ್ಥ್ ಹೆಗ್ಡೆ, ವರುಣ್ಕುಮಾರ್, ಜಯಂತ್ ಹೆಗ್ಡೆ, ಹಿಮಾನ್ವಿ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.













