ನುಳಿಯಾಲು ಸತೀಶ ಅನಾರೋಗ್ಯದಿಂದ ನಿಧನ

0

ನಿಡ್ಪಳ್ಳಿ ;ಗ್ರಾಮದ ನುಳಿಯಾಲು ನಿವಾಸಿ ಕೂಲಿ ಕಾರ್ಮಿಕ ಸತೀಶ (35 ವ) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ  ಸೆ.24ರಂದು ನಿಧನರಾದರು

ಕೂಲಿ ಕಾರ್ಮಿಕರಾಗಿದ್ದು ಅವರು ಉಬ್ಬಸ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಸೆ.23ರ ರಾತ್ರಿ ಊಟ ಮಾಡಿ ಮಲಗಿದ್ದವರು ವಿಪರೀತ ಕೆಮ್ಮಿನಿಂದ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪರಿಶೀಲಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಅವರ ಮನೆಯವರು ತಿಳಿಸಿದ್ದಾರೆ.  ಮೃತರು ತಾಯಿ ಸುಶೀಲ ಹಾಗೂ ಸಹೋದರ ಸುಭಾಷ್ ಅವರನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here