







ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್-1 ಇವರ ಸಹಯೋಗದೊಂದಿಗೆ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್ ಕ್ರೀಡಾಂಗಣದಲ್ಲಿ ಜರಗಿದ ಪುತ್ತೂರು ತಾಲೂಕು ಮಟ್ಟದ 17ರ ವಯೋಮಾನದ ಫುಟ್ಬಾಲ್ ಪಂದ್ಯಾಟದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದ ಏಳು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ವಿದ್ಯಾರ್ಥಿನಿಯರಾದ ಆರಾಧ್ಯ (10ನೇ) ಸ್ವಾಲಿಯ (10ನೇ) ನಿಧಿ ಕುಮಾರಿ (10ನೇ) ಭವಿಷ್ಯ (10ನೇ) ಪಾತಿಮತ್ ನಸೀಬ ರಮಲತ್ (10ನೇ) ಫಾತಿಮತ್ ಫಿದಾ (9ನೇ )ಆಯಿಷಾ ರೌಹಾ (8ನೇ)ರವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೊರವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ದೀಕ್ಷಾ ಪಿ.ಎನ್ ತರಬೇತಿ ನೀಡಿದ್ದಾರೆ.













