ಪುತ್ತೂರು ಟೌನ್ ಬ್ಯಾಂಕ್ ಹಾಲ್‌ನಲ್ಲಿ “ವೈಭವಂ ಫ್ಯಾಷನ್ ಮೇಳ”

0

  • ಉತ್ತಮ ಗುಣ ಮಟ್ಟದ ವಸ್ತುಗಳು- ಕಾವು ಹೇಮನಾಥ ಶೆಟ್ಟಿ

ಪುತ್ತೂರು: ದೀಪಮ್ ಮಂಗಳೂರು ಸಂಸ್ಥೆ ಪ್ರಸ್ತುತ ಪಡಿಸುವ ವೈಭವಂ ಫ್ಯಾಷನ್ ಮೇಳ ಸೆ.26ರಂದು ಪುತ್ತೂರು ಟೌನ್ ಬ್ಯಾಂಕ್ ಹಾಲ್‌ನಲ್ಲಿ ಉದ್ಘಾಟನೆಗೊಂಡಿದ್ದು, ಸೆ.28ರತನಕ ನಡೆಯಲಿದೆ.

ಉತ್ತಮ ಗುಣ ಮಟ್ಟದ ವಸ್ತುಗಳು- ಹೇಮನಾಥ ಶೆಟ್ಟಿ
ಸೆ.26ರಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಗುಣಮಟ್ಟದ ವಸ್ರ್ರಗಳ ಮೂಲಕ ಮಂಗಳೂರಿನಲ್ಲಿ ಮನೆ ಮಾತಾಗಿರುವ ದೀಪಮ್ ಸಂಸ್ಥೆಯ ಮಾಲಕರಾದ ಸುಧಾ ಪ್ರಹ್ಲಾದ್ ಸುವರ್ಣ ಅವರು ಪುತ್ತೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ವೈಭವಂ ಫ್ಯಾಷನ್ ಮೇಳವನ್ನು ಮೂರು ದಿನ ಆಯೋಜನೆ ಮಾಡಿದ್ದಾರೆ. ಇದು ತುಂಬಾ ಸಂತೋಷದ ವಿಚಾರ, ಕಡಿಮೆ ಬೆಲೆಗೆ ಉತ್ತಮ ಗುಣ ಮಟ್ಟದ ಬಟ್ಟೆಗಳು ಗ್ರಾಹಕರಿಗೆ ಸಿಗಬೇಕು, ಈ ಕೆಲಸವನ್ನು ವೈಭವಂ ಫ್ಯಾಷನ್ ಮೇಳದಲ್ಲಿ ಕಾಣಬಹುದು. ಮಹಿಳೆಯರ ಅಚ್ಚು ಮೆಚ್ಚಿನ ವಿವಿಧ ಡಿಸೈನ್‌ಗಳ ಸೀರೆಗಳು, ಚೂಡಿದಾರ್ ಸೆಟ್‌ಗಳು, ಪುರುಷರ ಉಡುಗೆಗಳು ಇಲ್ಲಿ ದೊರೆಯುತ್ತದೆ. ಇಂದಿನ ದಿನಗಳಲ್ಲಿ ಚಿನ್ನವನ್ನು ಮಾಧ್ಯಮ ಮತ್ತು ಬಡ ವರ್ಗದವರಂತೂ ಖರೀದಿ ಮಾಡಲು ಬಹಳ ಕಷ್ಟ ಪಡುವ ಸಂದರ್ಭದಲ್ಲಿ ಅವರಿಗೆ ಒಳ್ಳೆಯ ಗುಣಮಟ್ಟದ, ಕಡಿಮೆ ದರದಲ್ಲಿ ಒನ್ ಗ್ರಾಮ್ ಗೋಲ್ಡ್ ಖರೀದಿ ಮಾಡಲು ಇಲ್ಲಿ ಅವಕಾಶ ಇದೆ. ಒಟ್ಟಿನಲ್ಲಿ ಗ್ರಾಹಕರಿಗೆ ಅವರು ಇಷ್ಟ ಪಡುವ ಒಳ್ಳೆಯ ಕ್ಯಾಲಿಟಿಯ ವಸ್ತಗಳು ಇಲ್ಲಿ ಲಭ್ಯವಿದೆ. ಪುತ್ತೂರಿನ ಜನತೆ ಪೂರ್ಣ ರೀತಿಯಲ್ಲಿ ಇದಕ್ಕೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆಯಲಿ- ವೀಣಾ ಶೆಟ್ಟಿ
ಮಂಗಳೂರು ಎಮ್‌ಆರ್‌ಪಿಎಲ್ ಸಂಸ್ಥೆಯ ನಿವೃತ್ತ ಜಿ.ಎಂ ವೀಣಾ ಶೆಟ್ಟಿರವರು ಮಾತನಾಡಿ ನಾನು ದೀಪಮ್ ಫ್ಯಾಷನ್‌ನ ಸುಧಾ ಅವರನ್ನು ೨೦ ವರ್ಷಗಳಿಂದ ನೋಡುತ್ತಿದ್ದೇನೆ, ಅವರು ವಿವಿಧ ಬಗೆಯ ಸೀರೆ, ಚೂಡಿದಾರ್, ಒನ್ ಗ್ರಾಮ್ ಗೋಲ್ಡ್ ಸಹಿತ ಅನೇಕ ಉತ್ವನ್ನಗಳನ್ನು ಗ್ರಾಹಕರಿಗೆ ಉತ್ತಮ ಗುಣ ಮಟ್ಟದಲ್ಲಿ ನೀಡುತ್ತಿದ್ದಾರೆ. ಇದು ನನಗೆ ತುಂಬಾ ಖುಷಿ ತಂದಿದೆ. ಗ್ರಾಹಕರಿಗೆ ಒಳ್ಳೆಯ ಕ್ವಾಲಿಟಿಯ ವಸ್ತುಗಳನ್ನು ನೀಡುತ್ತಿರುವ ಸುಧಾ ಅವರ ವೈಭವಂ ಫ್ಯಾಷನ್ ಮೇಳ ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆಯಲಿ ಎಂದರು.

ಪ್ರೋತ್ಸಾಹವನ್ನು ನೀಡಿ- ಸುಶ್ಮಾ
ಸಂಪ್ಯ ಠಾಣೆಯ ಎಸ್‌ಐ ಸುಶ್ಮಾರವರು ಮಾತನಾಡಿ ವೈಭವಂ ಫ್ಯಾಷನ್ ಮೇಳ ಪುತ್ತೂರಿನಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಿದ್ದಾರೆ. ಪುತ್ತೂರಿನ ಗ್ರಾಹಕರಿಗೆ ಇಲ್ಲಿ ಒಳ್ಳೆಯ ಗುಣಮಟ್ಟದ ವಸ್ತುಗಳು ಸಿಗುತ್ತದೆ. ಇಲ್ಲಿಗೆ ಬಂದು ಪ್ರೋತ್ಸಾಹವನ್ನು ನೀಡಿ ಎಂದು ಶುಭಹಾರೈಸಿದರು.

ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು, ಪುತ್ತೂರು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಮನೋರಮಾ ಸೂರ್ಯ, ಪುತ್ತೂರು ಲಯನ್ಸ್ ಕ್ಲಬ್ ವಲಯ ಅಧ್ಯಕ್ಷೆ ವೇದಾವತಿ ರಾಜೇಶ್‌ರವರುಗಳು ಸಂದಭೋಚಿತವಾಗಿ ಮಾತನಾಡಿದರು. ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ ನೆಲ್ಲಿಕಟ್ಟೆ, ಪುತ್ತೂರು ನಗರ ಸಭೆಯ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಮಾಜಿ ಸದಸ್ಯೆ ಗೌರಿ ಬನ್ನೂರು, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರಾದ ವತ್ಸಲಾ ಪಿ.ಶೆಟ್ಟಿ, ಜಯಶ್ರೀ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರಿನ ಜನರ ಸಹಕಾರ ಅಗತ್ಯ- ಸುಧಾ ಪ್ರಹ್ಲಾದ್
ಕಾರ್‍ಯಕ್ರಮದ ಅಯೋಜಕರಾದ, ಮಂಗಳೂರು ದೀಪಮ್ ಸಂಸ್ಥೆಯ ಮಾಲಕರಾದ ಸುಧಾ ಪ್ರಹ್ಲಾದ್ ಸುವರ್ಣ ಅವರು ಕಾರ್‍ಯಕ್ರಮ ನಿರೂಪಿಸಿ, ಸ್ವಾಗತಿಸಿ, ಮಾತನಾಡಿ ಬೆಳಿಗ್ಗೆ 9.30 ರಿಂದ ರಾತ್ರಿ 8ರತನಕ ನಡೆಯಲಿದೆ. ವೈಭವಂ ಫ್ಯಾಶನ್ ಮೇಳದಲ್ಲಿ ವಿವಿಧ ವಿನ್ಯಾಸದ ಸೀರೆಗಳು, ಚೂಡಿದಾರ್ ಸೆಟ್‌ಗಳು, 1 ಗ್ರಾಂ, ಚಿನ್ನದ ಅಭರಣಗಳು, ಬ್ಯಾಗ್‌ಗಳು, ಅಲಂಕಾರಿಕ ವಸ್ತಗಳು, ಆಯುರ್ವೇದ ಉತ್ಪನ್ನಗಳು, ದೇಶಿ ತಳಿ ತರಕಾರಿ ಬೀಜಗಳು, ಚೆನ್ನಪಟ್ಟಣದ ಅಟಿಕೆಗಳು, ಪಂಚಲೋಹದ ಅಭರಣಗಳು, ಪುರುಷರ, ಮಕ್ಕಳ ಉಡುಪುಗಳು ಮತ್ತು ಇತರ ವಸ್ತುಗಳು ಲಭ್ಯವಿದೆ. ಜೊತೆಗೆ ಸೋಲಾರ್ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ನಮ್ಮ ಫ್ಯಾಷನ್ ಮೇಳಕ್ಕೆ ಪುತ್ತೂರಿನ ಜನರ ಸಹಕಾರ ಅಗತ್ಯ ಎಂದು ಹೇಳಿದರು


ಸಾಮಾಜಿಕ ಮುಂದಾಳು ರವಿಪ್ರಸಾದ್ ಶೆಟ್ಟಿ ಬನ್ನೂರು, ನಿತ್ಯಾನಂದ ಶೆಟ್ಟಿ ಮನವಳಿಕೆ, ಗಂಗಾಧರ್ ಶೆಟ್ಟಿ ಎಲಿಕ, ಮುಖೇಶ್ ಕೆಮ್ಮಿಂಜೆರವರುಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು.


ಲಕ್ಕಿ ಡ್ರಾ ಗೆಲ್ಲುವ ಅವಕಾಶ, 40 ಶೇ. ರಿಯಾಯಿತಿ
ಗ್ರಾಹಕರಿಗೆ ಲಕ್ಕಿ ಡ್ರಾ ಮುಖಾಂತರ ವಿಶೇಷ ಬಹುಮಾನ, ರೂ.2000, ರೂ.1000, ರೂ 500, ಆಭರಣ ಹಾಗೂ ವಸ್ತ್ರ ಗೆಲ್ಲುವ ಅವಕಾಶ ಇದೆ. ಅಲ್ಲದೇ ಮಕ್ಕಳ ಮತ್ತು ಪುರುಷರ ಉಡುಪುಗಳ ಮೇಲೆ ಶೇ 40 ರಿಯಾಯಿತಿ ಇದೆ. ಸೆ.28ರಂದು ಗ್ರಾಹಕರಿಗೆ ಪುತ್ತೂರಿನಲ್ಲಿ ಖರೀದಿಸಲು ಕೊನೆಯ ದಿನವಾಗಿರುತ್ತದೆ

ಹಳೆಯ ಕಾಂಚಿಪುರಂ ಸೀರೆ ಖರೀದಿ
ಮೂರು ದಿನಗಳ ಕಾಲ ನಡೆಯುವ ಫ್ಯಾಷನ್ ಮೇಳದಲ್ಲಿ ಹಳೆಯ ಕಾಂಚಿಪುರಂ ಸೀರೆಗಳನ್ನು ಉತ್ತಮ ಬೆಲೆಗೆ ಖರೀದಿಸಲಾಗುವುದು ಎಂದು ಕಾರ್‍ಯಕ್ರಮದ ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here