ಸತ್ಯಸಾಯಿ ಮಂದಿರದಲ್ಲಿ 64ನೇ ಉಚಿತ ನೇತ್ರಾ ಚಿಕಿತ್ಸಾ ಶಿಬಿರ

0

ಪುತ್ತೂರು: ಶ್ರೀಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಮತ್ತು ಅಶ್ವಿನ್ ನೇತ್ರ ಚಿಕಿತ್ಸಾಲಯ ಇವರ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವು ಸೆ.27ರಂದು ಕೋರ್ಟ್‌ರಸ್ತೆ ಶ್ರೀಸತ್ಯಸಾಯಿ ಮಂದಿರದಲ್ಲಿ ನಡೆಯಿತು. ಶಿಬಿರವನ್ನು ಡಾ.ಅಶ್ವಿನ್ ಸಾಗರ್ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು.


ಕಣ್ಣಿನ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದ ನಿವೃತ್ತ ನೇತ್ರಾಧಿಕಾರಿ ಶಾಂತಾರಾಜ್ ಮಾತನಾಡಿ, ಶಿಬಿರದಲ್ಲಿ ದೃಷ್ಠಿ ಪರೀಕ್ಷೆ ನಡೆಸಿ ಓದುವ ಕನ್ನಡಕ ಸ್ಥಳದಲ್ಲಿಯೇ ವಿತರಿಸಲಾಗುತ್ತಿದೆ. ಸಮೀಪ ಹಾಗೂ ದೂರ ದೃಷ್ಠಿದೋಷ ಇರುವವರಿಗೆ ಕಂಪ್ಯೂಟರ್ ಸ್ಕ್ಯಾನಿಂಗ್ ನಡೆಸಿ ಕನ್ನಡ ಸಿದ್ದಪಡಿಸಿ ನೀಡಲಾಗುತ್ತಿದ್ದು ಅ.11ರಂದು ಮಂದಿರದಲ್ಲಿ ವಿತರಿಸಲಾಗುವುದು. ನೋಂದಾಯಿಸಿದ ಪ್ರತಿಯೊಬ್ಬರೂ ಕನ್ನಡಕ ಪಡೆದುಕೊಳ್ಳಬೇಕು. ಉಚಿತ ಶಿಬಿರದಲ್ಲಿ ಭಾಗವಹಿಸಿದವರಿಗೆ ಅಶ್ವಿನ್ ಕಣ್ಣಿನ ಚಿಕಿತ್ಸಾಲಯದಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಮಕ್ಕಳಿಗೆ ದೃಷ್ಟಿ ದೋಷ ಇದ್ದರೆ ಅರು ತಿಂಗಳಿಗೆ ಒಂದು ಬಾರಿ ಪರೀಕ್ಷೆ ನಡೆಸಬೇಕು. ಕಣ್ಣಿನಲ್ಲಿ ಪೊರೆಯಿದ್ದು ಶಸ್ತ್ರ ಚಿಕಿತ್ಸೆಯ ಆವಶ್ಯಕತೆ ಇದ್ದವರಿಗೆ ಸೆ.29ರಂದು ಮಂಗಳೂರಿನಲ್ಲಿ ಉಚಿತ ಪೊರೆ ಸರ್ಜರಿ ನಡೆಯಲಿದ್ದು ಅಲ್ಲಿಗೆ ತೆರೆಲುವವರಿಎ ಪುತ್ತೂರಿನಿಂದ ಉಚಿತ ಬಸ್ ಸೌಲಭ್ಯವಿದ್ದು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.


ಪುತ್ತೂರಿನಲ್ಲಿ ಪ್ರಥಮ ರೆಟಿನಾ ಸರ್ಜರಿ ಪ್ರಾರಂಭ
ಅಶ್ವಿನ್ ನೇತ್ರ ಚಿಕಿತ್ಸಾಲಯದ ಡಾ. ಅಶ್ವಿನ್ ಅವರು ಕಣ್ಣಿನ ಉನ್ನತ ಸರ್ಜರಿಗೆ ಸಂಬಂಧಿಸಿದ ರೆಟಿನಾ ಸರ್ಜರಿಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ರೆಟಿನಾ ಸರ್ಜರಿ ಮಾಡುವ ವೈದ್ಯರು ಜಿಲ್ಲೆಯಲ್ಲಿ ಇಬ್ಬರು ಮಾತ್ರವೇ ಇದ್ದು ಡಾ. ಅಶ್ವಿನ್ ಅವರು ಅಧ್ಯಯನ ಪೂರ್ಣಗೊಂಡ ಕೂಡಲೇ ಅವರ ಮೂಲಕ ಪುತ್ತೂರಿನಲ್ಲಿ ಪ್ರಥಮ ರೆಟಿನಾ ಸರ್ಜಿರಿ ಸೇವೆಯನ್ನು ಪ್ರಾರಂಭಿಸಲಾಗುವುದು. ಇನ್ನು ಮುಂದೆ ಕಣ್ಣಿನ ರೆಟಿನಾ ಸರ್ಜರಿಗಾಗಿ ದೂರದ ಬೆಂಗಳೂರಿಗೆ ಹೋಗಬೇಕಾದ ಆವಶ್ಯಕತೆಯಿಲ್ಲ ಪುತ್ತೂರಿನಲ್ಲಿಯೇ ಎಲ್ಲಾ ಚಿಕಿತ್ಸೆ ದೊರೆಯಲಿದೆ ಎಂದು ನಿವೃತ್ತ ನೇತ್ರಾಧಿಕಾರಿ ಶಾಂತರಾಜ್ ಹೇಳಿದರು.


ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಎನ್ ಭಟ್ ಮಾತನಾಡಿ, ಜನರ ಸೇವೆಯೇ ಸತ್ಯಸಾಯಿ ಮಂದಿರದ ಮುಖ್ಯ ಧ್ಯೇಯವಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಆರೋಗ್ಯ ಸೇವೆಗಳನ್ನು ಮಂದಿರದಲ್ಲಿ ನೀಡಲಾಗುತ್ತಿದೆ. ಸತ್ಯಸಾಯಿ ಮಂದಿರದಲ್ಲಿ ನಡೆಯುವ ಶಿಬಿರದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನರು ಬರುತ್ತಿದ್ದಾರೆ. ಮಂದಿರದಲ್ಲಿ ವರ್ಷಕ್ಕೆ 4 ಬಾರಿ ಕಣ್ಣಿನ ಚಿಕಿತ್ಸೆ ಹಾಗೂ ೪ ಬಾರಿ ದಂತ ಚಿಕಿತ್ಸೆಗಳ ಜೊತೆಗೆ ಪ್ರತಿ ಗುರುವಾರ ಉಚಿತ ವೈದ್ಯಕೀಯ ಶಿಬಿರಗಳು ನಡೆಯುತ್ತಿದೆ. ಜಿಲ್ಲೆಯಲ್ಲಿ ಏಳು ಕಡೆ ಸತ್ಯಸಾಯಿ ಮಂದಿರ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ಕಡೆ ಇದೇ ರೀತಿ ಉಚಿತ ಶಿಬಿರಗಳು ನಡೆಯುತ್ತಿರುತ್ತದೆ. ಯಾವುದೇ ಪ್ರಚಾರಕ್ಕಾಗಿ ಶಿಬಿರ ನಡೆಸುವುದಿಲ್ಲ. ಶಿಬಿರಕ್ಕಾಗಿ ಯಾವುದೇ ದೇಣಿಗೆ ಸಂಗ್ರಹಿಸುವುದಿಲ್ಲ. ಜನರ ಸೇವೆಯೇ ನಮ್ಮ ಉದ್ದೇಶ. ನಮ್ಮ ಸೇವೆಯು ಒಂದು ಧರ್ಮಕ್ಕೆ ಸೀಮಿತವಾಗಿರದೆ ಎಲ್ಲಾ ಧರ್ಮದವರಿಗೂ ಇಲ್ಲಿ ಸೇವೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ವಿಕಾಶ್ ಎಸ್.ಎಮ್ ಹಾಗೂ ಮಂಜುಳಾ ಬಿ.ಎಮ್ ಅವರನ್ನು ಗೌರವಿಸಲಾಯಿತು. ಶಾಯೀ ಈಶ್ಚರಿ ಪ್ರಾರ್ಥಿಸಿದರು. ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸತ್ಯಸುಂದರ ರಾವ್ ಸ್ವಾಗತಿಸಿದರು. ಸೇವಾ ಸಮಿತಿ ಸಂಚಾಲಕ ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಕಾಂಚನ ಮಾಲ ವಂದಿಸಿದರು. ಸತ್ಯಸಾಯಿ ಮಂದಿರ ಮುಖ್ಯಸ್ಥ ಪದ್ಮನಾಭ ನಾಯಕ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.


ಸಭಾ ಕಾರ್ಯಕ್ರಮದ ಬಳಿಕ ನಡೆದ ಶಿಬಿರದಲ್ಲಿ ಕಣ್ಣಿನ ಚಿಕಿತ್ಸೆಗಳನ್ನು ನಡೆಸಲಾಯಿತು. 259 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 189ಮಂದಿಗೆ ಸ್ಥಳದಲ್ಲೇ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. 16 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಶ್ವಿನ್ ನೇತ್ರ ಚಿಕಿತ್ಸಾಲಯದ ಸಿಬಂದಿಗಳು ಸಹಕರಿಸಿದರು.

ನ.26ರಂದು 65ನೇ ಶಿಬಿರ
ಸತ್ಯಸಾಯಿ ಮಂದಿರದಲ್ಲಿ ನಡೆದ 64ನೇ ಶಿಬಿರದಲ್ಲಿ ನಿರೀಕ್ಷೆಗೂ ಮೀರಿದ ಜನರ ಭಾಗವಹಿಸಿದ್ದಾರೆ. ಜನರ ಬೇಡಿಕೆಗೆ ತಕ್ಕಂತೆ ನ.26ರಂದು ಮಂದಿರದಲ್ಲಿ 65ನೇ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರವು ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಒಂದು ಕನ್ನಡಕಗಳಿಗೆ ಸುಮಾರು ರೂ.1೦೦೦ದಷ್ಟು ವೆಚ್ಚವಿದೆ. ನೋಂದಾಯಿಸಿದವರು ಕನ್ನಡಗಳನ್ನು ಪಡೆದುಕೊಂಡು ಸರಿಯಾಗಿ ಉಪಯೋಗಿಸಬೇಕು. ಮಂದಿರದ ಮೂಲಕ ಜನರಿಗೆ ಸೇವಾ ರೂಪದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಜನರು ನಮ್ಮ ಸೇವೆಯನ್ನು ಗೌರವಿಸಿ ಸಮಪರ್ಕವಾಗಿ ಬಳಸಿಕೊಳ್ಳುವಂತೆ ಸತ್ಯಸಾಯಿ ಮಂದಿರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here