







ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಡಿಕೆ, ತೆಂಗು, ಕಾಳುಮೆಣಸು ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಸಮಗ್ರ ಮಾಹಿತಿ ಕಾರ್ಯಗಾರ ಮುಂಡೂರಿನಲ್ಲಿರುವ ಸಂಘದ ಸಭಾಭವನದಲ್ಲಿ ನಡೆಯಿತು. ವಿಜ್ಞಾನಿ ಡಾ.ಬಿ.ಕೆ ವಿಶುಕುಮಾರ್ ಅವರು ವೈಜ್ಞಾನಿಕ ರೀತಿಯ ಕೃಷಿ ಕುರಿತಾಗಿ ಮಾಹಿತಿ ನೀಡಿದರು.


ಕೃಷಿಯಲ್ಲಿ ಮುಖ್ಯವಾಗಿ ನೀರಿನ ನಿರ್ವಹಣೆ, ಪ್ರಥಮ ಹಾಗೂ ದ್ವಿತೀಯ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಅವರು ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ನಿರ್ದೇಶಕರಾದ ವಸಂತ ಬಿ.ಎನ್, ಕೊರಗಪ್ಪ ಸೊರಕೆ, ಆನಂದ ಪೂಜಾರಿ ಕೆ, ನಮಿತಾ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಅನೇಕ ರೈತರು ಭಾಗವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸ್ವಾಗತಿಸಿ ವಂದಿಸಿದರು.













