ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಉಪಕಾರ್ಯದರ್ಶಿಯವರಿಂದ ಪ್ರಗತಿ ಪರಿಶೀಲನೆ

0

ಪುತ್ತೂರು: ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಇಲ್ಲಿನ ಉಪಕಾರ್ಯದರ್ಶಿ ಗುರುಪ್ರಸಾದ್ ಹೆಚ್.ಎಲ್.ಅವರು ಸೆ.24ರಂದು ಮಂಗಳೂರಿನಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.


ಬೆಳಗ್ಗೆ ಮಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಮಂಡಳಿಯ ಕಾರ್ಯಕ್ರಮಗಳ ಕುರಿತು ಅವರು ಸಭೆ ನಡೆಸಿದರು. ನಂತರ ಇಲಾಖೆ ಅಧಿಕಾರಿಗಳು/ಕಾರ್ಮಿಕ ನಿರೀಕ್ಷಕರುಗಳ ಪ್ರಗತಿ ಪರಿಶೀಲನೆ ನಡೆಸಿದರು. ಆ ಬಳಿಕ ಡಾಟ ಆಪರೇಟರ್‌ಗಳ ಪ್ರಗತಿ ಪರಿಶೀಲನೆ ಹಾಗೂ ಟೈಪಿಂಗ್ ಟೆಸ್ಟ್ ನಡೆಸಿದರು. ಸಂಜೆ ಸಂಚಾರಿ ಆರೋಗ್ಯ ಘಟಕ, ಕೆಎಸ್‌ಕೆ ಸ್ಥಳ ಪರಿಶೀಲನೆ ನಡೆಸಿದರು. ಭಾರತ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಅಶ್ರಫ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ನಾಯಕ್, ಸಂಘದ ಪದಾಧಿಕಾರಿ ಸುರೇಶ್ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here