







ಪುತ್ತೂರು: ಅನಾರೋಗ್ಯದಿಂದ ನಿಧನರಾದ ಆಟೋ ಚಾಲಕರೋರ್ವರ ಕುಟುಂಬಕ್ಕೆ ಪುತ್ತೂರು ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು.


ಸೆ.16ರಂದು ಅನಾರೋಗ್ಯದಿಂದ ನಿಧನರಾದ ಪುತ್ತೂರಿನ ಕರ್ಕುಂಜ ನಿವಾಸಿ ಆಟೋಚಾಲಕ ದಿನೇಶ್ರವರ ಕುಟುಂಬಕ್ಕೆ ಪುತ್ತೂರು ಸ್ನೇಹಸಂಗಮ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ಸಂಗ್ರಹಿಸಲ್ಪಟ್ಟ ಹಾಗೂ ಸ್ನೇಹಸಂಗಮದ ತುರ್ತು ಸೇವಾನಿಧಿ ವತಿಯಿಂದ ರೂ.12 ಸಾವಿರವನ್ನು ಹಸ್ತಾಂತರಿಸಲಾಯಿತು.



ಸಂಘದ ಅಧ್ಯಕ್ಷ ತಾರಾನಾಥ ಗೌಡ ಬನ್ನೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಸಂಚಾಲಕ ಅರವಿಂದ್ ಪೆರಿಗೇರಿ ಹಾಗೂ ಸದಸ್ಯರುಗಳಾದ ಲೋಕೇಶ್ ತೆಂಕಿಲ, ವಿನಾಯಕ ಬಲ್ನಾಡು, ಬಾಲಕೃಷ್ಣ ಕರ್ಕುಂಜ ಮತ್ತು ಲತೀಫ್ ಕರ್ಕುಂಜ ಉಪಸ್ಥಿತರಿದ್ದರು.










