ನರಿಮೊಗರು ಗ್ರಾನೈಟ್ ಅಂಗಡಿಗೆ ನುಗ್ಗಿ ಹಲ್ಲೆ-‌ ಪ್ರಕರಣ ದಾಖಲು

0

ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಗ್ರಾನೈಟ್ ಅಂಗಡಿಗೆ ನುಗ್ಗಿ ಅಂಗಡಿಯ ಮಾಲಕರಿಗೆ ಹಲ್ಲೆ ನಡೆಸಿದ ಘಟನೆ ಸೆ.26ರಂದು ನಡೆದ ಬಗ್ಗೆ ವರದಿಯಾಗಿದೆ.


ಪುರುಷರಕಟ್ಟೆ ಮಹಾಲಕ್ಷ್ಮೀ ಗ್ರಾನೈಟ್ ಸಂಸ್ಥೆಯಲ್ಲಿರುವ ರಾಜಸ್ಥಾನ್ ಮೂಲದ ಕುನನಾಥ್ (41ವ) ಹಲ್ಲೆಗೊಳಗಾದವರು. ಅವರು ಪುರುಷರಕಟ್ಟೆಯಲ್ಲಿ ಸಹೋದರ ರಾಮರಘುನಾಥ್ ಅವರ ಮಾಲಕತ್ವದ ಮಹಾಲಕ್ಷ್ಮೀ ಗ್ರಾನೈಟ್ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಸಮಯ ಸ್ಥಳೀಯ ಅನ್ಸಾರ್ ಖಾಸಿಂ ಎಂಬವರು ಏಕಾಏಕಿ ಅಂಗಡಿಯ ಒಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕುನನಾಥ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


LEAVE A REPLY

Please enter your comment!
Please enter your name here