










ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್ ಕೈಕಾರ, ಪುತ್ತೂರು ದ.ಕ. ಇದರ ಆಶ್ರಯದಲ್ಲಿ ಯು.ಆರ್. ಪ್ರಾಪರ್ಟಿಸ್ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವರ ಸಹಯೋಗದೊಂದಿಗೆ “ನಮ್ಮ ಕೈಕಾರ್ಡ್ ಕೆಸರ್ಡೊಂಜಿ ದಿನ” ಕಾರ್ಯಕ್ರಮವು ಸೆ. 27 ರಂದು ಪಳ್ಳತ್ತಾರಿನ ಶ್ರೀ ಜುಮಾದಿ ದೈವಸ್ಥಾನದ ಬಳಿಯ ದಿ. ಸರಸ್ವತಿ ಹೊಸಲಕ್ಕೆ ಅವರ ಗದ್ದೆಯಲ್ಲಿ ನವೀನ್ ರೈ ಪನಡ್ಕ-ಕೈಕಾರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.




ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ, ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಮಾಜಿ ಶಾಸಕಿ ಶಕುಂತಳ ಶೆಟ್ಟಿ, ಶಶಿಕಿರಣ್ ಕೈಕಾರ, ಸುಂದರ ರೈ ಪನಡ್ಕ, ಶಿವರಾಮ ಆಳ್ವ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಂಬಳದ ಕೋಣಗಳನ್ನು ಮೆರವಣಿಗೆ ಮೂಲಕ ಬಂದು ಕೆಸರು ಗದ್ದೆಗೆ ಇಳಿಯುವುದರ ಮೂಲಕ ಚಾಲನೆ ನೀಡಲಾಯಿತು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸೇರಿದಂತೆ ಸಾರ್ವಜನಿಕರಿಗೆ ಹಲವು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

ಸಂಜೆ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ “ಸಹ್ಯಾದ್ರಿ ಸಿರಿ” 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಹ್ಯಾದ್ರಿ ಸಿರಿ 2026 ಪ್ರಶಸ್ತಿ ಪ್ರದಾನ
ಉದ್ಯಮ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಹ್ಯಾದ್ರಿ ಸಿರಿ 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ.ಲಿ. ಮೈಸೂರು ಮಾಲಕ ದಿವಾಕರ್ ದಾಸ್ ನೇರ್ಲಾಜೆ, ಕರ್ನಾಟಕ ರಾಜ್ಯ ಸಹಕಾರ ಸಂಘದ ನಿರ್ದೇಶಕ (ಮೈಸೂರು ವಿಭಾಗ) ಶಶಿಕುಮಾರ್ ರೈ ಬಾಲ್ಯೊಟ್ಟು, ದೈವಾರಾಧನೆ ಮಧ್ಯಸ್ಥ ಶಶಾಂಕ ಶಂಕರ ನೆಲ್ಲಿತ್ತಾಯ, ನಿರೂಪಕ ಬಾಲಕೃಷ್ಣ ಪೊರ್ದಾಳ್, ಕಲಾಕ್ಷೇತ್ರದ ಸುಂದರ ರೈ ಮಂದಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ.ಜೆ. ಅವರಿಗೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕಿಶೋರ್ ಕುಮಾರ್ ಬೊಟ್ಯಾಡಿ, ರಾಧಾಕೃಷ್ಣ ರೈ ಬೂಡಿಯಾರ್, ಸಂತೋಷ್ ಕುಮಾರ್ ರೈ ಕೈಕಾರ, ರಾಮದಾಸ್ ಶಟ್ಟಿ ವಿಟ್ಲ, ಪ್ರಸನ್ನ ಮಾರ್ತ, ಶಿವಕುಮಾರ್, ಕೃಷ್ಣಪ್ರಸಾದ್ ಆಳ್ವ, ಗೀತಾ ಡಿ ಶೆಟ್ಟಿ, ಯತೀಶ್ ದೇವ, ನಿಮಿತ ಎನ್ ರೈ, ರಂಜಿನಿ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮತ್ತು ಸಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ ಇದರ ಗೌರವಾಧ್ಯಕ್ಷರಾದ ಪ್ರಜ್ವಲ್ ರೈ ತೊಟ್ಲ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.











