







ನಿಡ್ಪಳ್ಳಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕ ಶ್ರೀ ವರಮಹಾಲಕ್ಷೀ ವ್ರತ ಪೂಜಾ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇದರ ವತಿಯಿಂದ ರೂ.1,01,001 ದೇಣಿಗೆಯನ್ನು ಸೆ.28 ಹಸ್ತಾಂತರಿಸಿದರು. ಅಲ್ಲದೆ ಇರ್ದೆ ಗೋಪಾಲ ಕ್ಷೇತ್ರ ಶ್ರೀ ವಿಷ್ಣು ಮೂರ್ತಿ ದೇವಾಲಯದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೂ ರೂ.25,000 ದೇಣಿಗೆಯನ್ನು ನೀಡಲಾಯಿತು.


ಬೆಟ್ಟಂಪಾಡಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ ಬೀಡು, ಶಿವಕುಮಾರ್ ಬಲ್ಲಾಳ್ ಬೀಡು,ಪುರೋಹಿತ ರಾಧಾಕೃಷ್ಣ ಭಟ್ ಕಕ್ಕೂರು ಹಾಗೂ ಮತ್ತೀತರರು, ಪೂಜಾ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.













