ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಕಡಬ ತಾಲೂಕು ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ

0

ಕಡಬ: ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ಬೆಂಗಳೂರು ಇದರ 2026-31ನೇ ಅವಧಿಗೆ ಕಡಬ ತಾಲೂಕು ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.


ಕೊಣಾಜೆ ಸರಕಾರಿ ಹಿ.ಪ್ರಾ.ಶಾಲೆಯ ಹಾಲೇಶ ನಾಯ್ಕ ಜಿ., ಮುಗೇರಡ್ಕ ಸರಕಾರಿ ಹಿ.ಪ್ರಾ.ಶಾಲೆಯ ಆಶಾ ಕೆ.ಎನ್., ಪಲ್ಲತ್ತಾರು ಸರಕಾರಿ ಹಿ.ಪ್ರಾ.ಶಾಲೆಯ ರಂಗನಾಥ ಸಿ., ಕುದ್ಮಾರು ಸರಕಾರಿ ಉ.ಹಿ.ಪ್ರಾ.ಶಾಲೆಯ ಸಂತೋಷ ಎನ್.ಟಿ., ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ನವೀನ ಎ., ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯ ಮಧುಸೂಧನ ಕೆ.ಎ., ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯ ಚೇತನ್ ಎಚ್.ಡಿ., ಹಾಗೂ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯ ರಮೇಶ್ ಎನ್.ದೊಡ್ಡವಾಡ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 11 ನಿರ್ದೇಶಕರ ಸ್ಥಾನಕ್ಕೆ 8 ಮಂದಿ ನಾಮಪತ್ರ ಸಲ್ಲಿಸಿದ್ದು ಅವರ ಅವಿರೋಧ ಆಯ್ಕೆ ನಡೆದಿದೆ. 3 ಸ್ಥಾನಗಳು ಖಾಲಿಯಾಗಿವೆ. ಕಡಬ ತಾಲೂಕು ಪಂಚಾಯತ್ ನಿವೃತ್ತ ಮ್ಯಾನೇಜರ್ ಭುವನೇಂದ್ರ ಜೈನ್ ಚುನಾವಣಾಧಿಕಾರಿಯಾಗಿದ್ದರು. ಸೆ.25ರಂದು ಕಡಬ ಪ್ರೆಸ್ ಕ್ಲಬ್‌ನಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

LEAVE A REPLY

Please enter your comment!
Please enter your name here