







ಪುತ್ತೂರು: ಸರಕಾರಿ ಪದವಿಪೂರ್ವ ಕಾಲೇಜು ಸವಣೂರು ಪ್ರೌಢಶಾಲಾ ವಿಭಾಗದಲ್ಲಿ ಸವಣೂರು ವಲಯ ಮಟ್ಟದ 17 ರ ವಯೋಮಾನ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಿತು.


ಉದ್ಘಾಟನೆಯನ್ನು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸ್ಟಿಲಿಯ ಆರ್ ಕಾಸ್ಟಲಿನೋ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷ ಸತೀಶ್ ಬಲ್ಯಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಪಿ. ಡಿ ಕೃಷ್ಣಕುಮಾರ್ ರೈ ದೇವಸ್ಯ , ಉಭಯ ಸಂಸ್ಥೆಗಳ ಉಪಾಧ್ಯಕ್ಷ ಗಿರಿಶಂಕರ ಸುಲಾಯ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾ.ಕೃ.ಪತ್ತಿನ. ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಜಿಲ್ಲಾ ಯುವ ಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ನ್ಯಾಯವಾದಿ ಮಹೇಶ್ ಕೆ. ಸವಣೂರು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ, ಸವಣೂರು ಗ್ರಾ.ಪಂ, ಮಾಜಿ ಸದಸ್ಯರುಗಳಾದ ಅಬ್ದುಲ್ ರಝಕ್ , ಚಂದ್ರಾವತಿ ಸುಣ್ಣಾಜೆ , ರಾಜ್ಯ ದೈಹಿಕ ಶಿಕ್ಷಕರ ಸಂಘದ ಬಾಲಕೃಷ್ಣ ಕೆ, ಸವಣೂರು ಕ್ಲಸ್ಟರ್ ಸಿ.ಆರ್.ಪಿ ಜಯಂತ್ ವೈ , ನೋಡೆಲ್ ಅಧಿಕಾರಿ ವನಿತಾ ಮುಂಡೂರು, ಫ್ರೌಡ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸರಸ್ವತಿ, ನಯನ, ಪವಿತ್ರ ರೂಪೇಶ್, ಕವಿತಾ, ಇಂದಿರಾ, ರೇಖಾ, ನಯನ್ ಕುಮಾರ್ ಉಪಸ್ಥಿತರಿದ್ದರು.



ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಸ್ವಾಗತಿಸಿ, ರೀನಾ ಎಂ. ಡಿ. ವಂದಿಸಿದರು. ಶ್ರೀವೀಣಾ ಕಾರ್ಯಕ್ರಮ ನಿರೂಪಿಸಿದರು.










