







ಈಶ್ವರಮಂಗಲ: ಒಡಿಯೂರುಶ್ರೀ ಗ್ರಾಮವಿಕಾಸ ಯೋಜನೆಯ ಬೆಳ್ಳಿಹಬ್ಬದ ಸಂಭ್ರಮದ ಪ್ರಯುಕ್ತ ಒಡಿಯೂರುಶ್ರೀ ಗ್ರಾಮವಿಕಾಸ ಯೋಜನೆ ಈಶ್ವರಮಂಗಲ ಘಟಕ ಸಮಿತಿಯ ವತಿಯಿಂದ ಸ್ಥಳೀಯ ಶ್ರೀಗಜಾನನ ಶಾಲೆಗೆ ಕುಡಿಯುವ ನೀರಿನ ಫಿಲ್ಟರ್ ಕೊಡುಗೆಯಾಗಿ ನೀಡಲಾಯಿತು.
ಶ್ರೀಗಜಾನನ ಶಾಲೆಯಲ್ಲಿ ನಡೆದ ಈಶ್ವರಮಂಗಲ ಘಟಕ ಸಮಿತಿಯ ಸಭೆಯಲ್ಲಿ ಶಾಲೆಯ ಸಂಚಾಲಕ ಶಿವರಾಮ ಪಿ.ರವರಿಗೆ ಕೊಡುಗೆ ಹಸ್ತಾಂತರ ಮಾಡಲಾಯಿತು. ಕೊಡುಗೆ ಸ್ವೀಕರಿಸಿದ ಶಿವರಾಮ ಪಿ.ರವರು ಮಾತನಾಡಿ ಶಾಲೆ ದೇವಾಲಯಕ್ಕೆ ಸಮಾನ. ನೀವು ಕೊಟ್ಟ ಕೊಡುಗೆ ದೇವಾಲಯಕ್ಕೆ ಸಮರ್ಪಿಸಿದ ಹಾಗೆ. ಇದನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ. ಇದು ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಉಪಯೋಗವಾಗಲಿ ಎಂದರು ಹೇಳಿ ಕೃತಜ್ಞತೆ ಸಲ್ಲಿಸಿದರು.
ನಿವೃತ್ತ ಶಿಕ್ಷಕ ಶಿವರಾಮ ಶರ್ಮ ಮಾತನಾಡಿ ಒಡಿಯೂರು ಶ್ರೀಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂಬ ಆಶಯ ಒಟ್ಟುಕೊಂಡವರು. ನೀವು ಕೊಟ್ಟ ಕೊಡುಗೆಯನ್ನು ಮಕ್ಕಳಿಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಪುತ್ತೂರು ತಾಲೂಕು ಮೇಲ್ವಿಚಾರಕಿ ಸವಿತಾ ರೈ ನೆಲ್ಲಿತ್ತಡ್ಕ, ಸೇವಾ ದೀಕ್ಷಿತೆ ಭಾಗೀರಥಿ (ಬಾಗಿ), ಕರ್ನೂರು ಸೇವಾ ದೀಕ್ಷಿತೆ ಭವ್ಯ, ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಆಶಾ, ಘಟಕ ಸಮಿತಿಯ ಅಧ್ಯಕ್ಷೆ ಸುಮತಿ, ಕಾರ್ಯದರ್ಶಿ ವೇದಾವತಿ, ಉಪಾಧ್ಯಕ್ಷೆ ಕಮಲ, ಜೊತೆ ಕಾರ್ಯದರ್ಶಿ ಶೈಲಜಾ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.












