







ನಿಡ್ಪಳ್ಳಿ: ಯಾದವ ಸಮಾಜದ ಹಿರಿಯರು, ಸಾಮಾಜಿಕ ಮತ್ತು ಧಾರ್ಮಿಕ ಮುಂದಾಳು, ಆರ್ಲಪದವು ಶ್ರೀದೇವಿ ಕೃಪ ಕಟ್ಟಡ ಮಾಲಕ ದೇವಸ್ಯ ಮಹಾಲಿಂಗ ಮಣಿಯಾಣಿ (95) ಅವರು ಸೆ.30ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ತರಕಾರಿ ವರ್ತಕ ಕುಂಞಿ ಅಲಿಯಾಸ್ ನಾರಾಯಣ ಮಣಿಯಾಣಿ, ಗೋಪಾಲ ಮಣಿಯಾಣಿ, ಶ್ರೀಧರ ಮಣಿಯಾಣಿ, ಶಿವರಾಮ ಮಣಿಯಾಣಿ, ಪುತ್ರಿಯರಾದ ಲಲಿತಾ, ಪುಷ್ಪಾವತಿ, ಪೂರ್ಣಿಮಾ, ಸೊಸೆಯಂದಿರಾದ ಪ್ರೇಮ, ಜಯಂತಿ, ಸರೋಜಿನಿ, ರೇಣುಕಾ ಹಾಗೂ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.













