ಕೆನರಾ ಬ್ಯಾಂಕ್ ನೆಹರೂನಗರ ಪುತ್ತೂರು ಶಾಖಾ ಕಛೇರಿಯ ಅಧಿಕಾರಿ ಹೇಮಾವತಿ ಎಂ. ಕರ್ತವ್ಯದಿಂದ ನಿವೃತ್ತಿ

0

ಪುತ್ತೂರು: ಕೆನರಾ ಬ್ಯಾಂಕ್ ನೆಹರೂನಗರ ಪುತ್ತೂರು ಶಾಖಾ ಕಛೇರಿಯ ಅಧಿಕಾರಿ ಹೇಮಾವತಿ ಎಂ.ರವರು ಸೆ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ.


ಮಂಜೇಶ್ವರ ತಾಲೂಕು ಮುಲಿಂಜ ಗ್ರಾಮದ ನಾರಾಯಣ ನಾಯ್ಕ್ ಮತ್ತು ಪಾರ್ವತಿ ದಂಪತಿ ಪುತ್ರಿಯಾದ ಇವರು ಪ್ರಾಥಮಿಕ ಶಿಕ್ಷಣವನ್ನು ಮೂಡಂಬೈಲು ಕಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಮೀಯಪದವು ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಣವನ್ನು ಮಂಜೇಶ್ವರ ಗೋವಿಂದ ಪೈ ಮೆಮೋರಿಯಲ್ ಕಾಲೇಜು, ಪದವಿ ಶಿಕ್ಷಣವನ್ನು ಕಾಸರಗೋಡು ವಿದ್ಯಾನಗರ ಸರಕಾರಿ ಕಾಲೇಜುನಲ್ಲಿ ಪೂರೈಸಿದ್ದರು. 21-12-1987ರಲ್ಲಿ ಕೆನರಾ ಬ್ಯಾಂಕ್ ಸವದತ್ತಿ ಇಲ್ಲಿ ಉದ್ಯೋಗ ಪಡೆದು ನಂತರ ಅಜ್ಜಿನಡ್ಕ, ವಿಟ್ಲ, ಸಾಲೆತ್ತೂರು, ಚಿಕ್ಕಮಗಳೂರು, ಕನ್ಯಾನ, ಕಾರ್ಕಳ, ಬಿ.ಸಿ.ರೋಡು, ನೆಹರುನಗರ ಪುತ್ತೂರು ಶಾಖೆಯಲ್ಲಿ ಒಟ್ಟು 38 ವರ್ಷ ಮತ್ತು 9 ತಿಂಗಳ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಇವರು ಪತಿ ಕೃಷ್ಣ ನಾಯ್ಕ್, ಪುತ್ರರಾದ ಜೀವನ್ ಕುಮಾರ್, ನಿತಿನ್, ಭರತ್‌ರವರೊಂದಿಗೆ ವಿಟ್ಲ ಕಾಶಿಮಠ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here