ಧ.ಗ್ರಾ.ಯೋಜನೆ ಪಡ್ನೂರು ಒಕ್ಕೂಟದ ಪದಗ್ರಹಣ

0

ಪುತ್ತೂರು: ಧ.ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ಇದರ ಪಡ್ನೂರು ಒಕ್ಕೂಟದ ಪದಗ್ರಹಣ ಸಮಾರಂಭ ಪಡ್ನೂರು ಸೇವಾ ಕೇಂದ್ರದಲ್ಲಿ ನಡೆಯಿತು. ಮದಗ ಶ್ರೀಜನಾರ್ಧನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟರಮಣ ಭಟ್ ಹಾರಕರೆ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ ಜನರು ಸ್ವಾವಲಂಬಿಗಳಾಗಿ ಬದುಕುವಂತೆ ಮಾಡಿದ್ದು ಪೂಜ್ಯ ಖಾವಂದರ ದೂರದೃಷ್ಟಿಯ ಯೋಜನೆಗಳು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎಲ್ಲಾ ಜನರಿಗೂ ತಲುಪುವಂತೆ ಮಾಡಿದ ದೇವಸ್ಥಾನದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.


ಬನ್ನೂರು ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಮನೋಹರ ಗೌಡ ಮಾತನಾಡಿ ಯೋಜನೆಗೆ ಒಳಪಟ್ಟು ಎಲ್ಲಾ ಸದಸ್ಯರು ಸ್ವಾವಲಂಬನೆಯ ಜೀವನ ನಡೆಸಿಕೊಂಡು ಬರುತ್ತಿದ್ದಾರೆ ಯೋಜನೆಯಿಂದ ಜರಗುವ ಯಾವುದೇ ಕಾರ‍್ಯಕ್ರಮಗಳು ಅತ್ಯಂತ ಶಿಸ್ತುಬದ್ದವಾಗಿ ಹಾಗೂ ಸ್ವಚ್ಚತೆಯಿಂದ ಕೂಡಿರುತ್ತದೆ ಎಂದು ಹೇಳಿ ತಾನು ಯೋಜನೆಯ ಸದಸ್ಯರಾಗಿ ಸೇರ್ಪಡೆಗೊಂಡ ನಂತರದ ತನ್ನ ಅಭಿವೃದ್ದಿಯ ಬಗ್ಗೆ ತಿಳಿಸಿದರು.


ಜನಜಾಗೃತಿ ವೇದಿಕೆ ಬನ್ನೂರು ವಲಯದ ಅಧ್ಯಕ್ಷ ರಾಮಣ್ಣಗೌಡ ಮಾತನಾಡಿ ಖಾವಂದರ ಮಾರ್ಗದರ್ಶನದೊಂದಿಗೆ ನಡೆಯುವ ಯೋಜನೆಯ ಎಲ್ಲಾ ಕಾರ‍್ಯಕ್ರಮಗಳು, ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದು ಯೋಜನೆಗೆ ಒಳಪಟ್ಟ ಎಲ್ಲಾ ಸದಸ್ಯರು ಯಶಸ್ಸನ್ನು ಸಾಧಿಸುತ್ತಾ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ್ ಮಾತನಾಡಿ ಯೋಜನೆಯ ಮಾಹಿತಿ ನೀಡಿ ಯೋಜನೆಯು ದೇವಸ್ಥಾನದ ಕೆರೆ ಇದ್ದಂತೆ. ಅಂದರೆ ಯೋಜನೆಯಿಂದ ಯಾರೂ ಖಾಲಿ ಕೈಯಿಂದ ಹೋಗುವುದಿಲ್ಲ ಹಾಗೂ ಯೋಜನೆಯಲ್ಲಿ ಉದ್ಯೋಗ ಮಾಡುತ್ತಾ ಎಲ್ಲಾ ಜನರಿಗೂ ಕೃತಜ್ಞತೆಯಿಂದ ಇರಬೇಕು ಮತ್ತು ಸಂಸ್ಥೆಯ ಸಂತೋಷದ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.


ಬನ್ನೂರು ಗ್ರಾಮ ಪಂಚಾಯತ ಮಾಜಿ ಸದಸ್ಯೆ ವಿಮಲ ಹರೀಶ್, ಪಡ್ನೂರು ಜನಾರ್ಧನ ಯುವಕ ಮಂಡಲ ಅಧ್ಯಕ್ಷ ಸುಧಾಕರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಡ್ನೂರು ಒಕ್ಕೂಟದ ನೂತನ ಅಧ್ಯಕ್ಷ ಕೃಷ್ಣಪ್ಪ ಮೂಲ್ಯ ಮಾತನಾಡಿ ನಿಕಟಪೂರ್ವ ಸಮಿತಿಯವರಿಗೆ ಕೃತಜ್ಞತೆ ಸಮರ್ಪಿಸಿ ನೂತನ ಸಮಿತಿಯ ಉತ್ತಮ ರೀತಿಯಲ್ಲಿ ಕಾರ‍್ಯನಿರ್ವಹಿಸಲು ಮಂಜುನಾಥ ಸ್ವಾಮಿಯ ಅನುಗ್ರಹ ಹಾಗೂ ಖಾವಂದರ ಅಶೀರ್ವಾದದೊಂದಿಗೆ ಒಕ್ಕೂಟದ ಸದಸ್ಯರ ಸಹಕಾರ ಕೋರಿದರು.


ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಪಡ್ನೂರು ಕಾರ‍್ಯಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಕಮಲ ಬೇರಿಕೆಯವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು. ಯೋಜನೆಯ ಮುಖಾಂತರ ಮಂಜೂರಾದ ಮಾಸಶನ ಪಿಂಚಿಣಿ ಯೋಜನೆಯ ಮಂಜೂರಾತಿ ಪತ್ರ ವಿತರಿಸಲಾಯಿತು. ದಯಾನಂದ ಬೇರಿಕೆ ಒಕ್ಕೂಟದ ವಾರ್ಷಿಕ ವರದಿ ವಾಚಿಸಿದರು. ರೇವತಿ ಪಂಜಿಗುಡ್ಡೆ ಪ್ರಾರ್ಥಿಸಿ, ವಲಯ ಮೇಲ್ವಿಚಾರಕ ಸೊಹನ್ ಗೌಡ ಸ್ವಾಗತಿಸಿದರು. ಶ್ವೇತಾ ಬೇರಿಕೆ ವಂದಿಸಿ ರಾಜೇಶ್ ಬೇರಿಕೆ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಪ್ಪ ಬೇರಿಕೆ, ಚಂದ್ರಶೇಖರ ಆಟಕ್ಕು, ಹರೀಶ್ ಪಡ್ನೂರು, ಗಣೇಶ್ ಬಂಗೇರ, ಹೇಮಾವತಿ ಚಳ್ಳ, ಕುಸುಮಾವತಿ ಆಟಕ್ಕು, ದಯಾನಂದ ಬೇರಿಕೆ, ಜಯರಾಮ ಬೇರಿಕೆ ಸಹಕರಿಸಿದರು.

LEAVE A REPLY

Please enter your comment!
Please enter your name here