ನಿವೃತ್ತ ಸೇನಾನಿ, ಸಮಾಜ ಸೇವಕ ಚಂದಪ್ಪ ಮೂಲ್ಯರಿಗೆ ಸನ್ಮಾನ

0

ಉಪ್ಪಿನಂಗಡಿ: ಬಿಎಸ್ಸೆಫ್‌ನ ನಿವೃತ ಡೆಪ್ಯೂಟಿ ಕಮಾಂಡೆಂಟ್, ಸಮಾಜ ಸೇವಕ ಡಿ. ಚಂದಪ್ಪ ಮೂಲ್ಯ ಅವರನ್ನು ಮಂಗಳೂರಿನಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಡಿ. ಚಂದಪ್ಪ ಮೂಲ್ಯ ಅವರು ಬಿಎಸ್ಸೆಎಫ್‌ನ ಡೆಪ್ಯೂಟಿ ಕಮಾಂಡೆಂಟ್ ಆಗಿ ದೇಶದ ಭದ್ರತಾ ಸೇವೆಯಲ್ಲಿ 36 ವರ್ಷಗಳ ಕಾಲ ಸುದೀರ್ಘ ಹಾಗೂ ಗಣನೀಯ ಸೇವೆ ಸಲ್ಲಿಸಿದ್ದು, ವೃತ್ತಿ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ನಿವೃತ್ತಿಯ ಬಳಿಕ ಇವರು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಿರಂತರ ಸಮಾಜಸೇವೆ ನಡೆಸುತ್ತಿದ್ದಾರೆ. ಇವರ ಈ ಎಲ್ಲಾ ಸೇವಾ ಕಾರ್ಯಗಳಿಗಾಗಿ ವಿವಿಧ ಕ್ಷೇತ್ರಗಳ ಐದು ಮಂದಿ ಸಾಧಕರೊಂದಿಗೆ ಇವರೂ ಸನ್ಮಾನಕ್ಕೆ ಭಾಜನರಾಗಿದ್ದಾರೆ.


ಈ ಸಂದರ್ಭ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ, ಜಿ.ಪಂ. ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯ್‌ಕೋಡ್, ಸೈಬರ್ ಅಪರಾಧ ಠಾಣೆಯ ಡಿವೈಎಸ್ಪಿ ಮಂಜುನಾಥ್, ವೆನ್ಲಾಕ್ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ. ಮನೀಷ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಪಿ.ಓ. ರೋಡ್ರಿಗಸ್, ವಿಕಲ ಚೇತನ ಕಲ್ಯಾಣಾಧಿಕಾರಿ ಮನೀಷ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here