







ಅಧ್ಯಕ್ಷ-ಹಾಲೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ-ಚೇತನ್ ಎಚ್.ಡಿ., ಖಜಾಂಜಿ-ನವೀನ ಎ.


ಕಡಬ: ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ಬೆಂಗಳೂರು ಇದರ 2026-31ನೇ ಅವಧಿಗೆ ಕಡಬ ತಾಲೂಕು ಘಟಕದ ಅಧ್ಯಕ್ಷರಾಗಿ ಕೊಣಾಜೆ ಸರಕಾರಿ ಹಿ.ಪ್ರಾ.ಶಾಲೆ ಸಹಶಿಕ್ಷಕಿ ಹಾಲೇಶ ನಾಯ್ಕ್ ಜಿ., ಪ್ರಧಾನ ಕಾರ್ಯದರ್ಶಿಯಾಗಿ ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯ ಸಹಶಿಕ್ಷಕ ಚೇತನ್ ಎಚ್.ಡಿ., ಹಾಗೂ ಖಜಾಂಜಿಯಾಗಿ ಹಳೆನೇರಂಕಿ ಸರಕಾರಿ ಹಿ.ಪ್ರಾ.ಶಾಲೆಯ ಸಹಶಿಕ್ಷಕ ನವೀನ ಎ.,ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



ಸೆ.೨೯ರಂದು ಕಡಬದಲ್ಲಿ ನಡೆದ ಕಡಬ ತಾಲೂಕು ಸಮಿತಿಯ ನೂತನ ನಿರ್ದೇಶಕರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಡಬ ತಾಲೂಕು ಪಂಚಾಯತ್ನ ನಿವೃತ್ತ ಮ್ಯಾನೇಜರ್ ಭುವನೇಂದ್ರ ಜೈನ್ ಚುನಾವಣಾಧಿಕಾರಿಯಾಗಿದ್ದರು. ನಿರ್ದೇಶಕರಾದ ಮುಗೇರಡ್ಕ ಸರಕಾರಿ ಹಿ.ಪ್ರಾ.ಶಾಲೆಯ ಆಶಾ ಕೆ.ಎನ್., ಪಲ್ಲತ್ತಾರು ಸರಕಾರಿ ಹಿ.ಪ್ರಾ.ಶಾಲೆಯ ರಂಗನಾಥ ಸಿ., ಕುದ್ಮಾರು ಸರಕಾರಿ ಉ.ಹಿ.ಪ್ರಾ.ಶಾಲೆಯ ಸಂತೋಷ ಎನ್.ಟಿ., ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯ ಮಧುಸೂಧನ ಕೆ.ಎ., ಹಾಗೂ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯ ರಮೇಶ್ ಎನ್.ದೊಡ್ಡವಾಡ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ಬೆಂಗಳೂರು ಇದರ 2026-31ನೇ ಅವಧಿಗೆ ಕಡಬ ತಾಲೂಕು ಸಮಿತಿಯ 11 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ನಿರ್ದೇಶಕರ ಅವಿರೋಧ ಆಯ್ಕೆ ಸೆ.25ರಂದು ನಡೆದಿತ್ತು. 3 ಸ್ಥಾನಗಳು ಖಾಲಿಯಾಗಿವೆ.










